ಮ್ಯೂಚುವಲ್‌ ಫಂಡ್‌ ನಾಮಿನೇಷನ್:‌ ಮಾ.31 ಕೊನೆ ದಿನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ತಮ್ಮ ಖಾತೆಗಳಿಗೆ ಫಲಾನುಭವಿಗಳನ್ನು ನಾಮ ನಿರ್ದೇಶನ ಮಾಡಲು ಮಾರ್ಚ್ 31 ಕೊನೆಯ ದಿನವಾಗಿದೆ. ವಿಫಲವಾದರೆ ಅವರ ಫೋಲಿಯೊಗಳನ್ನು ಫ್ರೀಜ್ ಮಾಡಲಾಗುತ್ತದೆ ಮತ್ತು ಅವರು ಹೂಡಿಕೆಯನ್ನು ರಿಡೀಮ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೂಡಿಕೆ ಮಾರುಕಟ್ಟೆ ನಿಯಂತ್ರಕ ಸೆಬಿ ತಿಳಿಸಿದೆ.

ಈ ಕುರಿತು ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) 2022 ರ ಜೂನ್‌ 15 ರಂದು ಸುತ್ತೋಲೆಯನ್ನು ಹೊರಡಿಸಿ ಹೂಡಿಕೆದಾರರು ತಮ್ಮ ಖಾತೆಗೆ ಫಲಾನುಭವಿಗಳನ್ನು ನಾಮನಿರ್ದೇಶನ ಮಾಡುವುದನ್ನು ಕಡ್ಡಾಯಗೊಳಿಸಿದೆ. ಬಹುತೇಕರು ಈಗಾಗಲೇ ನಾಮಿನೇಷನ್‌ ಹೆಸರುಗಳನ್ನು ಸಲ್ಲಿಸಿದ್ದು ಇನ್ನೂ ನಾಮಿನೇಷನ್‌ ವ್ಯಕ್ತಿಗಳ ವಿವರ ನೀಡದೇ ಇರುವವರು ಕೂಡಲೇ ನಾಮನಿರ್ದೇಶನ ಮಾಡುವಂತೆ ಸೆಬಿ ಸೂಚಿಸಿದೆ. ವಿಫಲವಾದರೆ ಹೂಡಿಕೆಗಳು ಫ್ರೀಜ್‌ ಆಗಲಿವೆ.

ಹೂಡಿಕೆದಾರರು ಕಾರಣಾಂತರಗಳಿಂದ ಸಾವನ್ನಪ್ಪಿದರೆ ಅವರ ಖಾತೆಯಲ್ಲಿರುವ ಆಸ್ತಿಗಳನ್ನು ಯಾರ ಹೆಸರಿಗೆ ವರ್ಗಾಯಿಸಬೇಕು ಎಂಬುದಕ್ಕೆ ಈ ನಾಮನಿರ್ದೇಶನಗಳು ಅಗತ್ಯವಿದ್ದು ಈ ಹಿಂದೆ ನಾಮನಿರ್ದೇಶನವಿಲ್ಲದೇ ಅನೇಕ ಖಾತೆಗಳನ್ನು ತೆಗೆಯಲಾಗಿದ್ದು ಅವುಗಳಿಗೆಲ್ಲ ಉತ್ತರಾಧಿಕಾರಿಗಳನ್ನು ನೇಮಿಸುವಂತೆ ಸೆಬಿ ನಿರ್ದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!