ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ದೋಣಿ ಮುಳುಗಿ ನಾಪತ್ತೆಯಾಗಿದ್ದ 12 ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದು, ಅವುಗಳನ್ನು ನೀರಿನಿಂದ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಭಾಗಮತಿ ನದಿಯಲ್ಲಿ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿರುವ ದುರಂತ ಗುರುವಾರದಂದು ಸಂಭವಿಸಿತ್ತು. ಅಲ್ಲದೆಯೇ ನಿನ್ನೆಯೇ ಹದಿನೈದಕ್ಕೂ ಹೆಚ್ಚು ಮಂದಿಯ ರಕ್ಷಣೆಯನ್ನು ಮಾಡಲಾಗಿತ್ತು. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿತ್ತು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತುರ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಿಂದ ಉಳಿದವರನ್ನು ಪತ್ತೆ ಮಾಡಲಾಗಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಮೃತರನ್ನು ಕಾಮಿನಿ ಕುಮಾರಿ, ಸುಶ್ಮಿತಾ ಕುಮಾರಿ, ಬೇಬಿ ಕುಮಾರಿ, ಸಜ್ದಾ ಬಾನೋ, ಗಣಿತಾ ದೇವಿ, ಅಜ್ಮತ್, ರಿತೇಶ್ ಕುಮಾರ್, ಶಿವ್ಜಿ ಚೌಪಾಲ್, ಸಂಶುಲ್, ವಸೀಂ, ಮಿಂಟು ಮತ್ತು ಪಿಂಟು ಎಂದು ಗುರುತಿಸಲಾಗಿದೆ ಎಂದು ಗಾಯ್ಘಾಟ್ (ಮುಜಫರ್‌ಪುರ) ವೃತ್ತ ಅಧಿಕಾರಿ ರಾಘವೇಂದ್ರ ನಾಗ್ವಾಲ್ ತಿಳಿಸಿದ್ದಾರೆ. .
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವುದಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಸಿದ್ದಾರೆ.