ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ ಇಂದು ಜನ್ಮದಿನದ ಸಂಭ್ರಮದಲ್ಲಿದ್ದು, ಜಯನಗರದ ಎಂಇಎಸ್ ಗ್ರೌಂಡ್‍ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಆಚರಣೆ ಮಾಡಿಕೊಂಡಿದ್ದಾರೆ. ತದನಂತ ಮಾತನಾಡಿ ತಮ್ಮ ಅಭಿಮಾನಿಗಳನ್ನು ಹಾಡಿ ಹೊಗಳಿದ್ದಾರೆ.
ನನ್ನ ಫ್ಯಾನ್ಸ್ ಯಾವತ್ತೂ ಕಳಂಕ ತರುವ ಕೆಲಸ ಮಾಡೋದಿಲ್ಲ.ಅವ್ರು ತೋರಿಸೋ ಪ್ರೀತಿ ವ್ಯಕ್ತಿತ್ವದಿಂದ ನಾನು ಇಲ್ಲಿಯವರೆಗೆ ಬಂದಿದ್ದೇನೆ. ಹೋದಲ್ಲೆಲ್ಲ ತಲೆ ಎತ್ಕೊಂಡು ನಿಲ್ತೀವಿ ಅಂದ್ರೆ ಅವ್ರೇ ಕಾರಣ, ಅವ್ರಿಗೆ ಕಳಂಕ ತರುವಂತ ಕೆಲಸ ಯಾವತ್ತೂ ಮಾಡೋದಿಲ್ಲ. ಅವರೂ ಕೂಡ ನನ್ನ ಹೆಸರಿಗೆ ಕಳಂಕ ತರುವ ಕೆಲಸ ಮಾಡೋದಿಲ್ಲ. ಪ್ರೀತಿ ಸಂಪಾದಿಸೋದು ಕಷ್ಟದ ಕೆಲಸ. ಸಿಕ್ಕ ನಿಮ್ಮ ಪ್ರೀತಿಯನ್ನು ಸದಾ ಜೊತೆಯಲ್ಲೇ ಇಟ್ಟುಕೊಂಡು ಮುಂದುವರಿಯುತ್ತೇನೆ. ನನ್ನೆಲ್ಲಾ ಕೆಲಸಗಳನ್ನು ಹೀಗೇ ಹರಸಿ ಎಂದು ಹೇಳಿದ್ದಾರೆ.