ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ವೈಷ್ಣವಿ ಗೌಡ ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ಸದ್ಯ ಎಂಗೇಜ್ಮೆಂಟ್ ರೀತಿಯಲ್ಲಿಯೇ ಮದುವೆಯ ವಿಷಯವನ್ನೂ ಕೂಡ ವೈಷ್ಣವಿ ಬಿಟ್ಟುಕೊಟ್ಟಿಲ್ಲ.
ಇನ್ನು ಭಾವಿ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ ವೈಷ್ಣವಿ ಕುರಿತು ಹಲವಾರು ಯೂಟ್ಯೂಬ್ಗಳಲ್ಲಿ ಅವರ ಭಾವಿ ಪತಿಯ ಬಗ್ಗೆ ವಿಭಿನ್ನ ರೀತಿಯಲ್ಲಿ ವಿಷಯಗಳು ಬಂದಿದ್ದವು. ಆರಂಭದಲ್ಲಿ ಅನುಕೂಲ್ ಅವರ ಹೆಸರು ಅಕಾಯ್ ಎಂದೇ ಹೇಳಿದ್ದರಿಂದ ಬಹುತೇಕ ಎಲ್ಲಾ ಕಡೆ ಅಕಾಯ್ ಎಂದೇ ಹೇಳಲಾಗಿತ್ತು. ಇವರು ಏರ್ಫೋರ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನಟಿ ಹೇಳಿದ್ದರೂ, ಅದನ್ನು ಹಲವರು ಏರ್ಪೋರ್ಟ್ ಎಂದು ತಿಳಿಸಿದರು. ಇದಕ್ಕೆಲ್ಲಾ ವೈಷ್ಣವಿ ಗೌಡ ಈಗ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ, ನನ್ನ ಭಾವಿ ಪತಿಯ ಹೆಸರು ಅಕಾಯ್ ಎನ್ನುತ್ತಾರೆ. ಉದ್ಯಮಿ ಎಂದು ಕೆಲವು ಯೂಟ್ಯೂಬ್ ಚಾನೆಲ್ಗಳಲ್ಲಿ ಬರೆಯಲಾಗಿದೆ ಎನ್ನುತ್ತಲೇ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಹೆಸರು ಅಕಾಯ್ ಅಲ್ಲ, ಅನುಕೂಲ್ ಎಂದು. ದಯವಿಟ್ಟು ಏನೇನೋ ಪ್ರಸಾರ ಮಾಡಬೇಡಿ. ಅದೆಷ್ಟು ಕಾನ್ಫಿಡೆಂಟ್ ಆಗಿ ಹೇಳಿಬಿಡುತ್ತಾರೆ ಎಂದು ಕಂಡರೆ ನನಗೇ ಅಚ್ಚರಿಯಾಗುತ್ತದೆ ಎಂದಿದ್ದಾರೆ.