ಪತ್ನಿ ಆತ್ಮಹತ್ಯೆಗೆ ನನ್ನ ಅಕ್ರಮ ಸಂಬಂಧವೇ ಕಾರಣ: ಪೋಲೀಸರ ಮುಂದೆ ಬಾಯಿಬಿಟ್ಟ ಟೆಕ್ಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನ್ನ ಪತ್ನಿ (Wife) ಆತ್ಮಹತ್ಯೆಗೆ ನನ್ನ ಅಕ್ರಮ ಸಂಬಂಧವೇ ಕಾರಣ ಎಂದು ಟೆಕ್ಕಿಬಶೀರ್ ಉಲ್ಲಾ ಕೊನೆಗೂ ಪೊಲೀಸರ ಎದುರು ಸತ್ಯ ಒಪ್ಪಿಕೊಂಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಪತಿ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ಗೃಹಿಣಿ ಬಾಹರ್ ಅಸ್ಮಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಮಹಿಳೆಯ ಪೋಷಕರು ಟೆಕ್ಕಿ ಪತಿ ಬಶೀರ್ ಉಲ್ಲಾ ಮಗಳನ್ನ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾನೆಂದು ಆರೋಪಿಸಿದ್ದರು.

ಇದರ ತನಿಖೆಗೆ ಇಳಿದ ಪೊಲೀಸರು, ಅಸ್ಮಾ ಸೂಸೈಡ್‌ಗೆ ಪ್ರೇರಣೆ ನೀಡಿದ್ದ ಆರೋಪದ ಮೇಲೆ ಆರೋಪಿ ಟೆಕ್ಕಿ ಬಶೀರ್ ಉಲ್ಲಾನನ್ನ ವಿಚಾರಣೆ ಮಾಡಿದ್ದು, ಈ ವೇಳೆ ಮಾಜಿ ಪ್ರಿಯತಮೆಯೊಂದಿಗೆ ಅಕ್ರಮ ಸಂಬಂಧ ಇದ್ದ ಬಗ್ಗೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ನನಗೆ ಅಕ್ರಮ ಸಂಬಂಧ ಇತ್ತು. ಅದನ್ನು ಅವಳಿಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಹಾಗಾಗಿ ನಿತ್ಯ ನನ್ನ ಜೊತೆ ಗಲಾಟೆಗೆ ಮುಂದಾಗುತ್ತಾ ಇದ್ದಳು. ಆಕೆಯ ಗಲಾಟೆಗೆ ನಾನು ಕೇರ್ ಮಾಡದೇ ಇದ್ದುದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಪ್ಪೋಪ್ಪಿಕೊಂಡಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!