ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾದಾಗಿನಿಂದ ನನ್ನ ಲೈಫ್ ನರಕ ಆಗಿದೆ, ನಮ್ಮ ಮಧ್ಯೆ ಮಾತುಕತೆ ಇಲ್ಲ! ಪದೇ ಪದೆ ದುಬೈಗೆ ಹೋಗ್ತಿದ್ಲು. ಬರೀ ಅನುಮಾನಗಳಿಂದ ನಮ್ಮ ಸಂಬಂಧ ತುಂಬಿ ಹೋಗಿತ್ತು..
ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಲಾಕ್ ಆಗಿರುವ ನಟಿ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ಪರ್ಸನಲ್ ಮಾತಿದು.. ಸದ್ಯ ಜತಿನ್ ರನ್ಯಾರಿಂದ ಡಿವೋರ್ಸ್ ಬೇಕು ಎಂದು ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ.
2024 ಅಕ್ಟೋಬರ್ 6 ರಂದು ಬೆಂಗಳೂರಿನ ಬಾಸ್ಟಿನ್ ರೆಸ್ಟೋರೆಂಟ್ನಲ್ಲಿ ರನ್ಯಾ, ಜತಿನ್ ಇಬ್ಬರೂ ಮದುವೆ ಬ್ರೋಕರ್ ಮೂಲಕ ಭೇಟಿಯಾಗಿದ್ದರು. 2024 ಅಕ್ಟೋಬರ್ 23ರಂದು ರನ್ಯಾ, ಜತಿನ್ ಎಂಗೇಜ್ ಮೆಂಟ್ ಆಗಿತ್ತು. 2024 ನವೆಂಬರ್ 27 ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಅದ್ಧೂರಿ ಮದುವೆ ಕೂಡ ಆಗಿತ್ತು. ಬಳಿಕ ಲ್ಯಾವೆಲ್ಲೆ ರಸ್ತೆಯ ಐಷಾರಾಮಿ ಅಪಾರ್ಟ್ ಮೆಂಟ್ ನಲ್ಲಿ ವಾಸ್ತವ್ಯ ಹೂಡಿದ್ದರು.
ಮದುವೆಯಾದ ಒಂದೇ ತಿಂಗಳಿಗೆ ರನ್ಯಾ, ಜತಿನ್ ನಡುವೆ ಮನಸ್ತಾಪ ಶುರುವಾಗಿದ್ದು, ಸಂಬಂಧದಲ್ಲಿ ಪಾರದರ್ಶಕತೆ ಇಲ್ಲ, ಮಾತುಕತೆಯೂ ಇರಲಿಲ್ಲವೆಂದು ಪತಿ ಜತಿನ್ ಹುಕ್ಕೇರಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಮದುವೆಯಾದ ಎರಡೇ ತಿಂಗಳಿಗೆ ರನ್ಯಾ ದುಬೈಗೆ ಓಡಾಟ ನಡೆಸಿದ್ದರು. ಪದೇ ಪದೆ ರನ್ಯಾ ದುಬೈ ಟ್ರಿಪ್ಗೆ ಹೋಗುತ್ತಿದ್ದು, ಪತಿಗೆ ಅನುಮಾನ ಬಂದು ಜಗಳ ನಡೆದಿತ್ತು ಎನ್ನಲಾಗಿದೆ.