October 9, 2026
Friday, October 9, 2026
spot_img

ಅಮ್ಮ ನನ್ನನ್ನು ಸ್ವತಂತ್ರವಾಗಿ ಇರಲು ಬಿಡ್ತಾ ಇರಲಿಲ್ಲ: ತ್ರಿಬಲ್‌ ಮರ್ಡರ್‌ ಹಂತಕಿ ಶ್ವೇತಾ ಹೇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಕೆಆರ್‌ಪುರಂ ಶೀಗರಹಳ್ಳಿಯ ಸಾಯಿ ಗ್ರೀನ್‌ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ತ್ರಿಬಲ್‌ ಮರ್ಡರ್‌ ಕೇಸ್‌ಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶ್ವೇತಾಳನ್ನು ಪೊಲೀಸರು ಬಂಧಿಸಿದ್ದಾರೆ. ಆನಂತರ ಆಕೆ ಕೊಟ್ಟ ಹೇಳಿಕೆಗಳನ್ನು ಕೇಳಿ ಪೊಲೀಸರೇ ಶಾಕ್‌ನಲ್ಲಿದ್ದಾರೆ.

ತಾಯಿಯಾದವರು ಮಕ್ಕಳನ್ನು ಫ್ರೀಯಾಗಿ ಬಿಡಬೇಕು. ತಪ್ಪು ಮಾಡಿದಾಗ ತಿದ್ದೋಕೆ ಬಂದ್ರೆ ಸಾಕು. ಆದರೆ ನಮ್ಮಮ್ಮ ನನ್ನ ಇಡೀ ಲೈಫ್‌ನ್ನೇ ಅವಳ ಕಂಟ್ರೋಲ್‌ಗೆ ತೆಗೆದುಕೊಂಡಿದ್ದಳು. ಒಂದು ಕೆಲಸವನ್ನೂ, ನಿರ್ಧಾರವನ್ನು ಒಬ್ಬಂಟಿಯಾಗಿ ತೆಗೆದುಕೊಳ್ಳೋಕೆ ಬಿಡ್ತಾ ಇರಲಿಲ್ಲ. ನನ್ನ ಲೈಫ್‌ ಹಾಳುಮಾಡಿದ್ದಾಳೆ ಅದಕ್ಕೆ ಸಾಯಿಸಿಬಿಟ್ಟೆ ಎಂದು ಹೇಳಿದ್ದಾಳೆ.

ಆರೋಪಿ ಶ್ವೇತಾ ಹಾಗೂ ಆಕೆಯ ಬಾಯ್‌ಫ್ರೆಂಡ್‌ ಕೆನತ್‌ ಈ ಮರ್ಡರ್‌ ಪ್ಲಾನ್‌ ಮಾಡಿದ್ದಾರೆ. ಇಬ್ಬರೂ ಪ್ರತ್ಯೇಕ ದಾರಿಯಲ್ಲಿ ಹೋಗಿದ್ದು, ಸದ್ಯ ಶ್ವೇತಾ ಮಾತ್ರ ಸಿಕ್ಕಿಬಿದ್ದಿದ್ದಾಳೆ. ಆಕೆಯ ಪ್ರಿಯಕರನಿಗಾಗಿ ಹುಡುಕಾಟ ನಡೆಯುತ್ತಿದೆ.

ಪ್ರೀತಿ ಹಾಗೂ ಲಿವ್‌ ಇನ್‌ ರಿಲೇಷನ್‌ಶಿಪ್‌ಗೆ ಪೋಷಕರು ವಿರೋಧಿಸಿದ ಕಾರಣ ಬಾಯ್‌ಫ್ರೆಂಡ್‌ ಜೊತೆ ಸೇರಿ ಶ್ವೇತಾ ತಂದೆ, ತಾಯಿ ಹಾಗೂ ತಂಗಿಯನ್ನು ಮರ್ಡರ್‌ ಮಾಡಿದ್ದಳು.

Must Read