ತಲೆತಿರುಗುವಂತಿದೆ ಶಿಕ್ಷಕರ ರಜೆ ಪತ್ರ: ವಿಷಯ ತಿಳಿದು ಶಾಕ್‌ ಆದ ಮೇಲಧಿಕಾರಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಹಾರದ ಸರ್ಕಾರಿ ಶಿಕ್ಷಕರು ಬರೆದ ವಿಚಿತ್ರ ರಜೆ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ರಜೆಯ ಅರ್ಜಿಯಲ್ಲಿನ ಪತ್ರಗಳಲ್ಲಿ ಶಿಕ್ಷಕರು ಹೇಳಿರುವುದನ್ನು ನೋಡಿದರೆ ನಿಮ್ಮ ತಲೆ ಕೂಡ ತಿರುಗುತ್ತದೆ. ‘ಶೀಘ್ರದಲ್ಲೇ ನನ್ನ ಆರೋಗ್ಯ ಹದೆಗೆಡಲಿದೆ ಹಾಗಾಗಿ ಹಾಗಾಗಿ ನಾಲ್ಕೈದು ದಿನ ರಜೆ ಬೇಕು ಎಂದು ಪತ್ರದಲ್ಲಿ ನಮೂದಿಸಿದ್ದರೆ, ಮತ್ತೊಬ್ಬ ಶಿಕ್ಷಕಿ ನನಗೆ ಬೇಗ ಹೊಟ್ಟೆನೋವು ಬರುತ್ತದೆ ಎಂಬ ಕಾರಣ ಕೊಟ್ಟು ರಜೆ ಕೇಳಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ತಾಯಿ ಡಿಸೆಂಬರ್ 5 ರಂದು (12,2022) ರಾತ್ರಿ 8 ಗಂಟೆಗೆ ಸಾಯುತ್ತಾರೆ ಹಾಗಾಗಿ ರಜೆ ಕೊಡಿ ಎಂದು ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಬಿಹಾರದ ಶಿಕ್ಷಕರು ಹುಚ್ಚು ಕಾರಣ ನೀಡಿ ಬರೆದಿರುವ ಈ ರಜೆ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನು ನೋಡಿದ ನೆಟ್ಟಿಗರು ಅವರೆಲ್ಲ ಜವಾಬ್ದಾರಿಯುತ ಶಿಕ್ಷಕರೋ ಅಥವಾ ಸುಳ್ಳುಗಾರರೋ ಎಂದು ಪ್ರಶ್ನಿಸುತ್ತಿದ್ದಾರೆ. ಬಿಹಾರದಲ್ಲಿ ಭಾಗಲ್ಪುರ್ ಕಮಿಷನರ್ ದಯಾನಿಧನ್ ಪಾಂಡೆ ಇತ್ತೀಚೆಗೆ ಆದೇಶ ಹೊರಡಿಸಿದ್ದು, ರಜೆಗೆ ಮೂರು ದಿನ ಮುಂಚಿತವಾಗಿ ಅರ್ಜಿ ಸಲ್ಲಿಸದ ಹೊರತು ರಜೆ ನೀಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ಈ ಹಿನ್ನೆಲೆ ಇಂತಹ ವಿಚಿತ್ರ ರಜೆ ಪತ್ರಗಳು ನಾಯಿಕೊಡೆಗಳಂತೆ ಹುಟ್ಟುತ್ತಿರುವುದು ಗಮನಾರ್ಹ.

ಬಂಕಾ ಜಿಲ್ಲೆಯ ಕಚಾರಿ ಪಿಪ್ರಾ ಗ್ರಾಮದ ಅಜಯ್ ಕುಮಾರ್ ಎಂಬ ಶಿಕ್ಷಕ ತನ್ನ ತಾಯಿ ಡಿಸೆಂಬರ್ 5, 2022 ರಂದು ಸೋಮವಾರ ರಾತ್ರಿ 8 ಗಂಟೆಗೆ ಸಾಯುತ್ತಾರೆ ಎಂದು ಅಂತಿಮ ವಿಧಿಗಳನ್ನು ಮಾಡಲು ಡಿಸೆಂಬರ್ 6 ರಿಂದ ರಜೆ ಕೊಡುವಂತೆ ಹೇಳಿದರು. ಕಟೋರಿಯಾ ಮೂಲದ ನೀರಜ್ ಕುಮಾರ್‌ ತಾನು ಮದುವೆಗೆ ಹೋಗುತ್ತಿದ್ದು, ಅಲ್ಲಿ ಚೆನ್ನಾಗಿ ಊಟ ಮಾಡುವುದರಿಂದ ಹೊಟ್ಟೆನೋವು ಬರುತ್ತದೆ ಹಾಗಾಗಿ ರಜೆ ಕೊಡಿ ಎಂದಿದ್ದಾರೆ.

ಈ ವಿಚಿತ್ರ ಪತ್ರಗಳಿಗೆ ಪ್ರತಿಕ್ರಿಯಿಸಿದ ಶಿಕ್ಷಕರ ಸಂಘಗಳು ಅಂದು ರಜೆ ಕೊಡಲು ಸಾಧ್ಯವೇ ಇಲ್ಲ.. ರಜೆ ಬೇಕಿದ್ದರೆ ಮೊದಲೇ ಅರ್ಜಿ ಸಲ್ಲಿಸಿ ಎಂದು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.. ಆದರೆ ಮೂರು ದಿನ ಮುಂಚಿತವಾಗಿ ಸಮಸ್ಯೆ ಬರುತ್ತೆ ಅಂತ ಯೋಚಿಸುವುದಾದರೂ ಹೇಗೆ? ಯಾವ ರೀತಿಯ ಅವಶ್ಯಕತೆ ಉದ್ಭವಿಸುತ್ತದೆ ಎಂದು ತಿಳಿಯುವುದು ಹೇಗೆ? ಅದಕ್ಕಾಗಿಯೇ ಇಂತಹ ವಿಚಿತ್ರ ಪತ್ರಗಳೊಂದೊಗೆ ಶಿಕ್ಷಕರು ಪ್ರತಿಭಟಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!