ನನ್ನ ಬೆಂಬಲ ಏನಿದ್ರೂ ಆರ್ಸಿಬಿಗೆ ಮಾತ್ರ ಎಂದ ಪ್ರಖ್ಯಾತ ಫುಟ್ಬಾಲಿಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಐಪಿಎಲ್‌ ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಎಂದೆಂದಿಗೂ ನನ್ನ ಮೆಚ್ಚಿನ ತಂಡ ಎಂದು ಇಂಗ್ಲೆಂಡ್ ಫುಟ್ಬಾಲ್‌ ನಾಯಕ ಹ್ಯಾರಿ ಕೇನ್ ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ಕೇನ್‌, ಪಂದ್ಯಾವಳಿಯಲ್ಲಿ ಯಾವಾಗಲೂ ಆರ್ಸಿಬಿ ನನ್ನ ಫೇವರೇಟ್.‌ ಕಳೆದ ವರ್ಷಕ್ಕೆ ಹೋಲಿಸಿದರೆ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಈ ಬಾರಿ ಬಲಿಷ್ಠವಾಗಿದೆ. ಈ ಬಾರಿ ತಂಡವು ಕಪ್‌ ಗೆಲ್ಲುವ ನಿರೀಕ್ಷೆಯಿಂದ ಕಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇನ್ನೊಂದು ವಿಚಾರವೆಂದರೆ ಕೇನ್‌ ವಿರಾಟ್‌ ಕೊಹ್ಲಿಯ ದೊಡ್ಡ ಅಭಿಮಾನಿ. ಕೊಹ್ಲಿಯನ್ನು ಹಲವು ಬಾರಿ ಭೇಟಿಯಾಗಿ ಅವರೊಂದಿಗೆ ಸಂವಾದ ನಡೆಸಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದಿದ್ದಾರೆ. ಕಳೆದ ಬಾರಿ ಆರ್ಸಿಬಿಗೆ ದುರಾದೃಷ್ಟ ಕಾಡಿತ್ತು. ಈ ಬಾರಿ ತಂಡಕ್ಕೆ ಉತ್ತಮ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಆರ್ಸಿಬಿ ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಮಾಡಿದೆ. ಈ ಋತುವಿನಲ್ಲಿ ಅದ್ಭುತಗಳನ್ನು ಸಾಧಿಸಬಹುದು ಎಂಬ ನಂಬುಗೆಯಿದೆ. ಐಪಿಎಲ್‌ನಲ್ಲಿ ಕೆಲವು ಶ್ರೇಷ್ಠ ತಂಡಗಳಿವೆ. ನಾನು ಎಲ್ಲಾ ಪಂದ್ಯಗಳನ್ನು ವೀಕ್ಷಿಸಲು ಇಷ್ಟಪಡುತ್ತೇನೆ. ಆದರೆ ಆರ್ಸಿಬಿ ತಂಡ ಗೆಲ್ಲಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.
ವಿರಾಟ್‌ ವ್ಯಕ್ತಿತ್ವವನ್ನು ನಾನು ಬಹಳವೇ ಮೆಚ್ಚುತ್ತೇನೆ. ಆತ ನಿಜಕ್ಕೂ ಡೌನ್ ಟು ಅರ್ಥ್ ವ್ಯಕ್ತಿ. ಕ್ರಿಕೆಟ್ ಅನ್ನು ಆನಂದಿಸುತ್ತಾ ಆಡುತ್ತಾರೆ. ವಿರಾಟ್ ಬ್ಯಾಟಿಂಗ್‌ ವೀಕ್ಷಿಸುವುದೇ ಒಂದು ಅದ್ಭುತ ಅನುಭವ. ಅತನ ಆಟದ ಕಿಚ್ಚು ಮತ್ತು ಉತ್ಸಾಹವನ್ನು ನೋಡುವುದೇ ಖುಷಿ ಎಂದು ಕೇನ್ ಬಣ್ಣಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!