ಮಿಜೋರಾಂನಲ್ಲಿ ಮ್ಯಾನ್ಮಾರ್‌ ಸೇನೆ ವಿಮಾನ ಪತನ: 8 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಿಜೋರಾಂನ ಲೆಂಗ್‌ಪೊಯಿ ವಿಮಾನ ನಿಲ್ದಾಣದ ಬಳಿ ಮ್ಯಾನ್ಮಾರ್ ಮಿಲಿಟರಿ ವಿಮಾನ ಪತನಗೊಂಡಿದ್ದು, ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮ್ಯಾನ್ಮಾರ್‌ನಿಂದ ಬಂದ ಮಿಲಿಟರಿ ವಿಮಾನವು ಲೆಂಗ್‌ಪೊಯಿ ವಿಮಾನ ನಿಲ್ದಾಣದಲ್ಲಿ ರನ್‌ವೇಯಿಂದ ಹೊರಗುಳಿದಿದೆ ಮತ್ತು ಬೆಳಿಗ್ಗೆ 10:19 ರ ಸುಮಾರಿಗೆ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ (ಜ. 23). ವಿಮಾನದಲ್ಲಿ 14 ಮಂದಿ ಇದ್ದರು. ಗಾಯಗೊಂಡ ಎಂಟು ಜನರನ್ನು ಲೆಂಗ್‌ಪುಯಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮ್ಯಾನ್ಮಾರ್ ಮತ್ತು ಖಾಸಗಿ ಸೇನೆಯ ನಡುವಿನ ಘರ್ಷಣೆಯಿಂದಾಗಿ, ಮ್ಯಾನ್ಮಾರ್ ಸೈನಿಕರು ಮಿಜೋರಾಂನ ಲಾಂಗ್‌ಟ್ಲಾಯಿ ಜಿಲ್ಲೆಯ ಗಡಿಯತ್ತ ಸೈನಿಕರು ತೆರಳಿದ್ದರು. ಸೈನಿಕರನ್ನು ಕರೆದುಕೊಂಡು ಹೋಗಲು ಮ್ಯಾನ್ಮಾರ್ ಸೇನೆ ವಿಮಾನಗಳನ್ನು ಕಳುಹಿಸಿತ್ತು. ಆದರೆ, ಸೈನಿಕರನ್ನು ಕರೆದೊಯ್ಯುವ ಮುನ್ನವೇ ವಿಮಾನ ಪತನಗೊಂಡಿದೆ. ತುರ್ತು ಸೇವೆಗಳು ತಕ್ಷಣ ಪ್ರಯಾಣಿಕರನ್ನು ರಕ್ಷಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಹೇಳಲಾಗಿದೆ. 270ಕ್ಕೂ ಹೆಚ್ಚು ಮ್ಯಾನ್ಮಾರ್ ಸೈನಿಕರು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದಾರೆ. ಘರ್ಷಣೆಯಿಂದಾಗಿ ಅವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!