ರಾಜ್ಯದ ಎಸ್ಕಾಂಗಳಿಂದ ವಿದ್ಯುತ್ ದರ ಪರಿಷ್ಕರಣೆ ಪ್ರಸ್ತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಎಸ್ಕಾಂಗಳಿಂದ ವಿದ್ಯುತ್ ದರ ಪರಿಷ್ಕರಣೆ ಪ್ರಸ್ತಾಪ ಮಾಡಲಾಗಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಕೆಇಆರ್‌ಸಿಯಿಂದ ಸಾರ್ವಜನಿಕ ಸಭೆ ನಡೆಸಲಾಗುತ್ತದೆ.

ಪ್ರತಿ ಯುನಿಟ್‌ಗೆ 40-60 ಪೈಸೆವರೆಗೆ ವಿದ್ಯುತ್ ದರ ಹೆಚ್ಚಳಕ್ಕೆ ಎಸ್ಕಾಂಗಳು ಪ್ರಸ್ತಾಪ ಮಾಡಿವೆ. ಬೆಸ್ಕಾ, ಹೆಸ್ಕಾಂ, ಮೆಸ್ಕಾಂ ಹಾಗೂ ಜೆಸ್ಕಾಂ ದರ ಪರಿಷ್ಕರಣೆಗೆ ಎದುರು ನೋಡುತ್ತಿದೆ.

ಕೆಇಆರ್‌ಸಿಗೆ ಬಂದಿರುವ ಮನವಿ ಅನುಸಾರ ಸಾರ್ವಜನಿಕರ ಅಭಿಪ್ರಾಯ ಆಕ್ಷೇಪಣೆ ಹಾಗೂ ಸಲಹೆಗಳನ್ನು ಕ್ರೋಢೀಕರಿಸಲು ಸಭೆ ನಡೆಸಲಾಗುತ್ತದೆ.

ಕಲ್ಲಿದ್ದಲು, ಉತ್ಪಾದನಾ ವೆಚ್ಚ, ಕಚ್ಚಾ ಸಾಮಾಗ್ರಿಗಳ ದರ ಏರಿಕೆ ಹಿನ್ನೆಲೆಯಲ್ಲಿ ಈ ಪ್ರಸ್ತಾವ ಎದುರಿಟ್ಟಿದ್ದು, ನಾಳಿನ ಸಭೆಯಲ್ಲಿ ಏನಾಗುತ್ತದೆ? ಕಾದುನೋಡಬೇಕಿದೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!