ಮೈಸೂರಿನಲ್ಲಿ ಬಾಲಕಿಯೊಬ್ಬಳಿಗೆ ತಗುಲಿರುವುದು ಮಂಕಿಪಾಕ್ಸ್ ಅಲ್ಲ, ಚಿಕಿನ್ ಪಾಕ್ಸ್: ವರದಿಯಿಂದ ನಿಟ್ಟಿಸಿರು ಬಿಟ್ಟ ಆರೋಗ್ಯ ಇಲಾಖೆ

ಹೊಸದಿಗಂತ ವರದಿ,ಮೈಸೂರು:

ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಗ್ರಾಮವೊಂದರ 12 ವರ್ಷದ ಬಾಲಕಿಯೊಬ್ಬಳಿಗೆ ತಗುಲಿರುವುದು ಮಂಕಿ ಪಾಕ್ಸ್ ಅಲ್ಲ, ಬದಲಿಗೆ ಚಿಕಿನ್ ಪಾಕ್ಸ್ ರೋಗ ಎಂದು ಪ್ರಯೋಗಾಲಯದಿಂದ ವರದಿ ಬಂದಿದ್ದು, ಇದರಿಂದಾಗಿ ಆರೋಗ್ಯ ಇಲಾಖೆ ನೆಮ್ಮದಿಯ ನಿಟ್ಟಿಸಿರುವ ಬಿಟ್ಟಿದೆ. ಭಾದಿತ
ಬಾಲಕಿಯ ದೇಹದ ಮೇಲೆ ಬೊಬ್ಬೆಗಳು ಕಂಡು ಬಂದಿತ್ತು. ಚಿಕಿತ್ಸೆ ಕೊಡಿಸಿದರೂ ಗುಣವಾಗದ ಹಿನ್ನೆಲೆ ಮೈಸೂರಿನ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ, ಬಾಲಕಿಯ ದೇಹದಲ್ಲಿ ಬೊಬ್ಬೆಗಳು ಇರುವುದನ್ನು ಗಮನಿಸಿದ ವೈದ್ಯರು, ಮಂಕಿಪಾಕ್ಸ್ ಗುಣಲಕ್ಷಣ ಕಂಡು ಬಂದಿರುವುದರಿ0ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ, ಬಾಲಕಿಯ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಿ, ಬೆಂಗಳೂರಿನ ಪ್ರಯೋಗಾಲಯಕ್ಕೆ ಬಾಲಕಿಯ ರಕ್ತ ಪರೀಕ್ಷಾ ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದರು. ಇದೀಗ ಅಲ್ಲಿಂದ ನೆಗಟಿವ್ ವರದಿ ಬಂದಿದೆ. ಅಲ್ಲದೇ ಬಾಲಕಿಗೆ ತಗುಲಿರುವುದು ಮಂಕಿ ಪಾಕ್ಸ್ ಅಲ್ಲ, ಚಿಕಿನ್ ಪಾಕ್ಸ್ ಎಂಬುದನ್ನು ವರದಿಯಲ್ಲಿ ದೃಢಪಡಿಸಲಾಗಿದೆ. ಬಾಲಕಿಗೆ ಚಿಕನ್ ಪಾಕ್ಸ್ ವೈರಸ್ ತಗುಲಿದ್ದರೂ, ರೋಗ ಲಕ್ಷಣಗಳು ಮಂಕಿಪಾಕ್ಸ್ ನಂತೆ ಕಂಡು ಬಂದಿರುವುದು ಅಪರೂಪವಾಗಿದೆ. ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆ ಮತ್ತಷ್ಟು ಚೇತರಿಸಿಕೊಂಡಿದ್ದಾಳೆ. ಚಿಕನ್ ಪಾಕ್ಸ್ ರೋಗ ಅಪಾಯಕಾರಿಯಲ್ಲ, ಹಾಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಡಿಎಚ್‌ಒ ಡಾ.ಕೆ.ಹೆಚ್.ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಚಿಕನ್ ಪಾಕ್ಸ್ಗೂ ಕೋಳಿ ಮಾಂಸಕ್ಕೂ ಯಾವುದೇ ಸಂಬAಧವಿಲ್ಲ, ಕೋಳಿ ಮಾಂಸ ತಿನ್ನುವುದರಿಂದ ಚಿಕಿನ್ ಪಾಕ್ಸ್ ರೋಗ ಬರುವುದಿಲ್ಲ. ಇದು ಸಾಮಾನ್ಯ ಜ್ವರ, ಕೆಮ್ಮಿನಂತೆ ಬರುವ ವೈರಸ್ ಆಗಿದೆ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!