ಹೊಸದಿಗಂತ ಡಿಜಿಟಲ್ ಡೆಸ್ಕ್:
ಓಣಂ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತಗ್ಗಿಸಲು ಹಾಗೂ ಸುಗಮ ಪ್ರಯಾಣಕ್ಕೆ ಅನುಕೂಲವಾಗುವಂತೆ ನೈಋತ್ಯ ರೈಲ್ವೆ, ಮೈಸೂರು–ಕಣ್ಣೂರು–ಬೆಂಗಳೂರು ದಂಡು ನಡುವೆ ತಲಾ ಎರಡು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಪ್ರಾರಂಭಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 06227 ಮೈಸೂರು–ಕಣ್ಣೂರು ವಿಶೇಷ ಎಕ್ಸ್‌ಪ್ರೆಸ್ ಆಗಸ್ಟ್ 28ರಂದು ಮಂಗಳವಾರ ರಾತ್ರಿ 10.30ಕ್ಕೆ ಮೈಸೂರಿನಿಂದ ಹೊರಟು ಮರುದಿನ ಮಧ್ಯಾಹ್ನ 2 ಗಂಟೆಗೆ ಕಣ್ಣೂರು ತಲುಪಲಿದೆ. ಹಿಂತಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06228 ಕಣ್ಣೂರು–ಬೆಂಗಳೂರು ದಂಡು ವಿಶೇಷ ಎಕ್ಸ್‌ಪ್ರೆಸ್ ದಿನಾಂಕ ಆಗಸ್ಟ್ 26ರ ಗುರುವಾರ ಸಂಜೆ 6:25 ಗಂಟೆಗೆ ಕಣ್ಣೂರಿನಿಂದ ಹೊರಟು, ಮರುದಿನ ಬೆಳಗ್ಗೆ 8:35 ಗಂಟೆಗೆ ಬೆಂಗಳೂರು ದಂಡು ತಲುಪಲಿದೆ. ರೈಲು ಸಂಖ್ಯೆ 06229 ಮೈಸೂರು–ಕಣ್ಣೂರು ವಿಶೇಷ ಎಕ್ಸ್‌ಪ್ರೆಸ್ ದಿನಾಂಕ ಆಗಸ್ಟ್ 29ರಂದ ಶನಿವಾರ ರಾತ್ರಿ 11:55 ಗಂಟೆಗೆ ಮೈಸೂರಿನಿಂದ ಹೊರಟು, ಮರುದಿನ ಸಂಜೆ 5:50 ಗಂಟೆಗೆ ಕಣ್ಣೂರು ತಲುಪಲಿದೆ.
ಹಿಂತಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06230 ಕಣ್ಣೂರು–ಬೆಂಗಳೂರು ದಂಡು ವಿಶೇಷ ಎಕ್ಸ್‌ಪ್ರೆಸ್ ಆ.30ರ (ಭಾನುವಾರ) ಸಂಜೆ 7:45 ಗಂಟೆಗೆ ಕಣ್ಣೂರಿನಿಂದ ಹೊರಟು, ಮರುದಿನ ಬೆಳಗ್ಗೆ 10 ಗಂಟೆಗೆ ಬೆಂಗಳೂರು ದಂಡು ತಲುಪಲಿದೆ. ಮಾರ್ಗ ಮಧ್ಯೆ ಮೈಸೂರು–ಕಣ್ಣೂರು ವಿಶೇಷ ರೈಲುಗಳು ಮಂಡ್ಯ, ಕೆಎಸ್‌ಆರ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ ಜಂಕ್ಷನ್, ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್, ತಿರುಪ್ಪೂರು, ಪೊದನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಶೋರನೂರು ಜಂಕ್ಷನ್, ತಿರೂರು, ಖಾಜಿಕೊಡ, ವಡಕರ ಮತ್ತು ತಲಶ್ಶೇರಿ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಇದೆ. ಹಿಂತಿರುಗುವ ದಿಕ್ಕಿನಲ್ಲಿ ಸಂಚರಿಸುವ ಕಣ್ಣೂರು–ಬೆಂಗಳೂರು ದಂಡು ವಿಶೇಷ ರೈಲು ಬೆಂಗಳೂರು ದಂಡು ನಿಲ್ದಾಣದಲ್ಲಿ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ.



