ಉತ್ತಮ ಸಮಾಜ ನಿರ್ಮಾಣ,ರಾಷ್ಟ್ರನಿರ್ಮಾಣದಲ್ಲಿ ಮೈಸೂರಿನ ಅವಧೂತ ದತ್ತಪೀಠದ ಮಹತ್ವದ ಹೆಜ್ಜೆ: ಪ್ರಧಾನಿ ಮೋದಿ

ಹೊಸದಿಗಂತ ವರದಿ,ಮೈಸೂರು:

ಮೈಸೂರಿನ ಅವಧೂತ ದತ್ತಪೀಠವು ಉತ್ತಮ ಸಮಾಜ ನಿರ್ಮಾಣ,ರಾಷ್ಟ್ರನಿರ್ಮಾಣದಲ್ಲಿ ಮಹತ್ವದ ಹೆಜ್ಜೆ ಇರಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.
ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಯವರ 80ನೆ ವರ್ಷದ ಜನ್ಮದಿನದ ಹಿನ್ನಲೆಯಲ್ಲಿ ಭಾನುವಾರ ವರ್ಚುವಲ್ ಮೂಲಕ ಸ್ವಾಮೀಜಿ ಅವರಿಗೆ ಶುಭಕಾಮನೆಗಳನ್ನು ಕೋರಿದ ಮೋದಿ ಅವರು,
ಮೊದಲಿಗೆ ಕನ್ನಡದಲ್ಲಿ ಮಾತು ಪ್ರಾರಂಭಿಸಿ ,ಜಯ ಗುರುದತ್ತ ಅಪ್ಪಾಜಿಅವರಿಗೆ 80 ನೆ ವರ್ಧಂತಿ ಸಂದರ್ಭದ ಲ್ಲಿ ಪ್ರಣಾಮ ಹಾಗೂ ಶುಭಕಾಮನೆಗಳು ಎಂದು ಹೃದಯಪೂರ್ವಕವಾಗಿ ಹೇಳಿದರು.
ಶ್ರೀ ಸ್ವಾಮಿಜಿಯವರ ಕಲ್ಯಾಣಕಾರ್ಯಗಳು ಸಂತಸ ತಂದಿದೆ,ಇದು ಎಲ್ಲರಿಗೂ ಮಾರ್ಗದರ್ಶಕವಾಗಿದೆ. ಇದೇ ವೇಳೆ ಹನುಮದ್ವಾರ ಉದ್ಘಾಟನೆ ಆಗಿರುವುದು ಸಂತಸ ಎಂದರು.
ಜಪಾನಿಗೆ ಹೋಗಬೇಕಾದರಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಸಾಮಾಜಿಕ ನ್ಯಾಯದ ಪ್ರೇರಣೆಯಾಗಿ ಗಣಪತಿ ಶ್ರೀಗಳು ಕೆಲಸ ಮಾಡುತ್ತಿದ್ದಾರೆ. ದೇಶದ ನಾನಾ ಭಾಗಗಳಲ್ಲಿ ಆಶ್ರಮ ಮಾಡಿ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಜನರ ಕಲ್ಯಾಣ ಮಠದ ಆಶಯ. ಅಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕöÈತಿಕ ಕ್ಷೇತ್ರಗಳಲ್ಲಿ ಶ್ರೀ ಮಠದ ಕೊಡುಗೆ ಅಪಾರ ಎಂದು ಶ್ಲಾಘಿಸಿದರು. .
ಗುರುದೇವ ದತ್ತನ ಪ್ರೇರಣೆಯಿಂದ ಶ್ರೀ ಗಳು ಜನಕಲ್ಯಾಣ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಂತರು,ಸಜ್ಜನರು,ವಿಭೂತಿ ಪುರುಷರ ಕಾರ್ಯಗಳು ಇತರರಿಗೆ ಪ್ರೇರಣೆಯಾಗಿದೆ.ಇದಕ್ಕೆ ಶ್ರೀ ಗಣಪತಿ ಸ್ವಾಮೀಜಿ ಪ್ರತ್ಯಕ್ಷ ಉದಾಹರಣೆ ಎಂದು ಬಣ್ಣಿಸಿದರು.
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಧ್ಯಾತ್ಮಿಕತೆಯ ಜತೆ, ಜತೆಗೆ ಆಧುನಿಕತೆಯೂ ಮೇಳೈಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನ ನಿರಂತರವಾಗಿದೆ,ಲೋಕಲ್ ಟು ಗ್ಲೋಬಲ್ ವರೆಗೂ ಶ್ರೀ ಸ್ವಾಮೀಜಿಯವರ ಕಾರ್ಯಕ್ಷಮತೆ ಎದ್ದು ಕಾಣುತ್ತಿದೆ ಅವರಿಗೆ ಮತ್ತೊಮ್ಮೆ ಶುಭಕಾಮನೆಗಳು ಎಂದು ನರೇಂದ್ರ ಮೋದಿಯವರು ತಿಳಿಸಿದರು.
ನಮ್ಮ ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ಸಾರುವ ಕೆಲಸವನ್ನು ಇಂತಹ ಮಠಗಳು ಮಾಡುತ್ತಿವೆ. ಸಬ್ ಕ್ ಸಾಥ್, ಸಬ್ ಕಾ ವಿಕಾಸ್ ಮಂತ್ರದAತೆ ದೇಶ ಸಾಗುತ್ತಿದೆ. ನಮ್ಮ ಮುಂದೆ ಮುಂದಿನ 25 ವರ್ಷದ ರೂಪುರೇಷೆಯಿದೆ. ಈ ರೂಪು ರೇಷೆಯ ಕಾರ್ಯ ರೂಪಕ್ಕೆ ತರಲು ಇಂತಹ ಮಠಗಳ ಸಹಕಾರ ಮುಖ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿ,ಹೈದರಾಬಾದ್‌ನ ಶ್ರೀ ತ್ರಿದಂಡಿ ಚಿನ್ನ ಶ್ರೀಮನ್ನಾರಾಯಣ ರಾಮಾನುಜ ಜೀಯರ್ ಸ್ವಾಮಿ, ಕಿರಿಯ ಶ್ರೀ ಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿ, ಅಹೋಬಲ ಸ್ವಾಮೀಜಿ, ಮೈಸೂರು ನಗರಪಾಲಿಕೆಯ ಮೇಯರ್ ಸುನಂದಾ ಪಾಲನೇತ್ರ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!