ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ದಸರಾ ಮಹೋತ್ಸವದ ಅಂತವಾಗಿ ನಡೆದ ಯುವ ದಸರಾ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅದ್ಧೂರಿ ಚಾಲನೆ ನೀಡಿದರು.
ಮೊದಲ ದಿನವೇ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಸುಮದುರ ಕಂಠದ ಮೂಲಕ ಮೋಡಿ ಮಾಡಿದರು.
ಖ್ಯಾತ ಗಾಯಕಿ ಶ್ರೇಯಾ ಘೋಷಲ್ ಯುವ ದಸರಾ ಕಾರ್ಯಕ್ರಮದ ಮೊದಲ ದಿನ ದರ್ಶನ್ ನಟನೆಯ ʻಚಕ್ರವರ್ತಿʼ ಚಿತ್ರದ ʻಒಂದು ಮಳೆ ಬಿಲ್ಲುʼ, ಕೊಟ್ಟಿಗೊಬ್ಬ-2 ಚಿತ್ರದ ʻಸಾಲುತಿಲ್ಲವೇ ಸಾಲುತಿಲ್ಲವೇʼ, ಸಂಜು ವೆಡ್ಸ್ ಗೀತಾ ಚಿತ್ರದ ʻಗಗನವೇ ಬಾಗಿʼ ಗೀತೆ ಹಾಡುವ ಮೂಲಕ ಯುವಜನರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದರು.