spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

Latest Posts

ತಾಯಿಯ ಶವದೊಂದಿಗೆ ಮೂರು ದಿನ ಕಾಲ ಕಳೆದ ಮಾನಸಿಕ ಅಸ್ವಸ್ಥ ಮಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೂರು ದಿನಗಳ ಕಾಲ ತಾಯಿಯ ಶವದೊಂದಿಗೆ ಅಪಾರ್ಟ್ ಮೆಂಟ್‌ನಲ್ಲೇ ಮಗ ವಾಸ ಮಾಡಿರುವ ಘಟನೆ ಹೈದರಾಬಾದ್‌ನ ಮಲ್ಕಾಜಿಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಷ್ಣುಪುರಿ ಕಾಲೋನಿಯಲ್ಲಿ ನಡೆದಿದೆ. ವಿಜಯಾ ಎಂಬ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಸ್ಥಳೀಯ ಮೈತ್ರಿನಿವಾಸ್ ಅಪಾರ್ಟ್ ಮೆಂಟ್ ನಲ್ಲಿರುವ ಫ್ಲಾಟ್ ನಂ.202ರಲ್ಲಿ ಪತ್ತೆಯಾಗಿದೆ. ಆಕೆಯ ಮಗ ಸಾಯಿಕೃಷ್ಣ ಮೂರು ದಿನಗಳ ಕಾಲ ಮೃತದೇಹದ ಪಕ್ಕದಲ್ಲೇ ವಾಸ ಮಾಡಿದ್ದಾರೆ. ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿದೆ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಮಲ್ಕಾಜ್‌ಗಿರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದರು. ಸಾಯಿಕೃಷ್ಣ ಮಾನಸಿಕ ಪರಿಸ್ಥಿತಿ  ಸರಿಯಿಲ್ಲ, ಆಗಾಗ ತಾಯಿ ಮತ್ತು ಮಗ ಜಗಳವಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಥನಾಗಿರುವ ಮಗ ತಾಯಿಯನ್ನು ಕೊಂದಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap