ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದ ಕಡಧಾಮ್‌ನಲ್ಲಿ ಟೆರೇಸ್ ಮೇಲೆ ಆಟ ಆಡಲು ಹೋದ ಬಾಲಕಿಯರು ಮೃತಪಟ್ಟಿದ್ದಾರೆ. ಇಲ್ಲಿ ಎಲ್ಲವೂ ನಿಗೂಢವಾಗಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರು ಕಣ್ಣೀರಿಡುತ್ತಿದ್ದಾರೆ.
ಪಕ್ಕದ ಮನೆಯ ಟೆರೇಸ್‌ನಲ್ಲಿ ಚಾಕೋಲೆಟ್‌ಗಳು ಬಿದ್ದಿದ್ದು, ನಾಲ್ವರು ಬಾಲಕಿಯರು ಅದನ್ನು ಸೇವಿಸಿದ್ದಾರೆ. ತಕ್ಷಣವೇ ನಾಲ್ವರೂ ಹೊಟ್ಟೆನೋವು, ಎದೆ ಉರಿಯಿಂದ ಬಳಲಿದ್ದಾರೆ.
ಮಕ್ಕಳ ಕೂಗು ಕೇಳಿದ ಪೋಷಕರು ಮಕ್ಕಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾಧನಾ(7) ಹಾಗೂ ಆಕೆಯ ಸಹೋದರಿ(4) ಶಾಲಿನಿ ಮೃತಪಟ್ಟಿದ್ದಾರೆ. ಇನ್ನಿಬ್ಬರು ಬಾಲಕಿಯರಿಗೆ ಚಿಕಿತ್ಸೆ ನಡೆಯುತ್ತಿದೆ.
ಯಾರಾದರೂ ದ್ವೇಷದಿಂದ ವಿಷಪೂರಿತ ಚಾಕೋಲೆಟ್‌ಗಳನ್ನು ಟೆರೇಸ್ ಮೇಲೆ ಎಸೆದಿದ್ದಾರಾ ಎನ್ನುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ನಂತರ ಸ್ಪಷ್ಟ ಉತ್ತರ ಸಿಗಲಿದೆ.