ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ದಿನಗಳಲ್ಲಿ ಸಣ್ಣ ವ್ಯಾಪಾರವನ್ನು ನಡೆಸಲು, ಏನಾದರೂ ಹೊಸತನ ಇರಬೇಕು. ಇಲ್ಲದಿದ್ದರೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಲ್ಲಲು ಜಾಗ ಇರಲ್ಲ. ಅಂಗಡಿಯ ಹೆಸರಿನಿಂದ ಹಿಡಿದು ಎಲ್ಲವೂ, ಎಲ್ಲರಿಗೂ ಆಕರ್ಷಕವಾಗಿರಬೇಕು. ಅಲ್ಲದೆ, ಅವರ ಉತ್ಪನ್ನವನ್ನು ಮಾರಾಟ ಮಾಡಲು ಹೊಸ ಸ್ಲೋಗನ್..ವ್ಯಾಪಕ ಮಾರುಕಟ್ಟೆ ಇದ್ದರೆ ಮಾತ್ರ ಇಂದಿನ ಕಾಲದಲ್ಲಿ ವ್ಯವಹರಿಸಲು ಸಾಧ್ಯ. ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕನೊಬ್ಬನ ಮಹತ್ವಾಕಾಂಕ್ಷೆ ಎಲ್ಲರ ಮನಗೆದ್ದಿದೆ.
ಮುಂಬೈ ನಗರದ ಜನನಿಬಿಡ ರಸ್ತೆ ಬದಿಯಲ್ಲಿ ಒಂದು ಸಣ್ಣ ಸ್ಟ್ಯಾಂಡ್‌ನಲ್ಲಿ ಮಯಾಂಕ್ ಪಾಂಡೆ ಎಂಬ ಯುವಕ ʻದಿ ಕಾಫಿ ಬಾರ್ʼ ಎಂಬ ಕಾಫಿ ಸ್ಟಾಲ್ ಸ್ಥಾಪಿಸಿದ್ದಾನೆ. ತನ್ನ ಕಾಫಿ ಸ್ಟಾಲ್ ಅನ್ನು ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಮಾರುಕಟ್ಟೆಯನ್ನಾಗಿ ಮಾಡುವುದು ಅವರ ಆಶಯ ಮತ್ತು ಮಹತ್ವಾಕಾಂಕ್ಷೆಯಾಗಿದೆ. ತನ್ನ ಮಹತ್ವಾಕಾಂಕ್ಷೆಯನ್ನು ಮರೆಯದೆ ಆತನನ್ನು ಪ್ರೇರೇಪಿಸಲು ಒಂದು ಬೋರ್ಡ್ ಹಾಕಿದ್ದಾನೆ. ಅವನ ಚಿಕ್ಕ ಅಂಗಡಿಯ ಮುಂದೆ ಇದ್ದ ಬೋರ್ಡಿನಲ್ಲಿ “I want to take my coffee bar to global market” ಎಂದು ಬರೆದುಕೊಂಡಿದ್ದಾನೆ.
ಹೀಗಾಗಿ ಅವರ ಜಾಗದಲ್ಲಿ ಕಾಫಿ ಕುಡಿಯಲು ಬಂದವರೆಲ್ಲ ಈ ಬೋರ್ಡ್ ನೋಡಿ ಅಚ್ಚರಿ ಪಡುತ್ತಿದ್ದಾರೆ. ಅವರಿಗೆ ಹಸ್ತಲಾಘವ ನೀಡಿ ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ. ಯಾರೋ ಒಬ್ಬರು ಬೋರ್ಡ್‌ನ ಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರೂ ಸಹ ಯುವಕನ ಆಸೆ ಈಡೇರಲಿ ಎಂದು ಹರಸುತ್ತಿದ್ದಾರೆ.