ಹಿಂದು ಪುರಾಣದ ಪ್ರಕಾರ ಇಡೀ ಬ್ರಹ್ಮಾಂಡದಲ್ಲಿ 14 ಲೋಕಗಳ ಕುರಿತು ಉಲ್ಲೇಖಗಳಿವೆ. ಅಥರ್ವವೇದದಲ್ಲಿ ಹೇಳಿರುವಂತೆ ಏಳು ಲೋಕಗಳನ್ನು ಸ್ವರ್ಗವೆಂದು ಮತ್ತು ಇನ್ನುಳಿದ ಏಳು ಲೋಕಗಳನ್ನು ಪಾತಳಾಲೊಕವೆಂದು ವಿಭಜಿಸಲಾಗಿದೆ. ಅವು ಯಾವುವು ಎಂದು ನೋಡೋಣ.
ಭುವರ್ಲೋಕ: ಅನ್ವೇಷಿಸಿ ದೇವರಾದ ವಾಯು ಮತ್ತು ಅಗ್ನಿಯಿಂದ ಆಳ್ವಿಕೆ ನಡೆಸಲ್ಪಡುವ ಭುವರ್ಲೋಕವು ಭೂಮಿ ಮತ್ತು ಸ್ವರ್ಗದ ನಡುವಿನ ಅಂತರವಾಗಿದ್ದು, ಇದನ್ನು ಮನುಷ್ಯನು ಮರಣದ ನಂತರ ಆತ್ಮಗಳು ಇರಬಹುದಾದ ಲೋಕವೆನ್ನಲಾಗಿದೆ.
ಭೂ ಲೋಕ: ಈ ಲೋಕದಲ್ಲಿ ನಾವು ಅಂದರೆ ಮಾನವರು ಮತ್ತು ಇತರ ಜೀವಿಗಳೊಂದಿಗೆ ವಾಸಿಸುವ ಲೋಕ.
ಸ್ವರ್ಗರ್ಲೋಕ: ಇದನ್ನು ದೇವರುಗಳ ರಾಜನಾದ ಇಂದ್ರನು ಆಳುವುದರಿಂದ ಇದನ್ನು ದೇವಲೋಕ ಎಂದು ಸಹ ಕರೆಯಲಾಗುತ್ತದೆ. ಆತ್ಮಗಳು ತಮ್ಮ ಹಿಂದಿನ ಜನ್ಮಗಳಿಂದ ಮಾಡಿದ ಒಳ್ಳೆಯ ಕಾರ್ಯಗಳ ಫಲವನ್ನು ಅನುಭವಿಸುವ ಲೋಕವಾಗಿದೆ.
ಮಹರ್ಲೋಕ: ಒಳ್ಳೆಯ ಕರ್ಮವನ್ನು ಮಾಡಿದ ಆತ್ಮಗಳು ಉಳಿಯುವ ಲೋಕವೇ ಮಹರ್ಲೋಕ. ಇದನ್ನು ರಾಜ ಪ್ರಜಾಪತಿಯು ಆಳ್ವಿಕೆ ನಡೆಸುತ್ತಾನೆ.
ಜನಲೋಕ: ಸೃಷ್ಟಿಕರ್ತನಾದ ಬ್ರಹ್ಮನ ಪುತ್ರರ ನೆಲೆಯಾಗಿರುವ ಜನಲೋಕವು ಉನ್ನತ ಮಟ್ಟದ ಆಧ್ಯಾತ್ಮಿಕತೆಯನ್ನು ಪಡೆದವರ ಆತ್ಮಗಳು ಇರುವಂತಹ ಲೋಕ.
ಸತ್ಯಲೋಕ: ಇಲ್ಲಿ ಸೃಷ್ಟಿಕರ್ತ ಬ್ರಹ್ಮ ದೇವರು ವಾಸಿಸುವ ಲೋಕವಾಗಿದ್ದು, ಕೇವಲ ಸತ್ಯ, ಶುದ್ಧತೆ, ಜ್ಞಾನೋದಯ ಮತ್ತು ಅಂತಿಮ ಮೋಕ್ಷ ಇರುವ ಪ್ರದೇಶವಾಗಿದೆ.
ತಪಲೋಕ: ನಾರದರು ಸೇರಿದಂತೆ ತಪಸ್ವಿ ಋಷಿಗಳು ತಪಸ್ಸನ್ನು ಆಚರಿಸುವ ‘ಧ್ಯಾನ’ಕ್ಕೆ ಮೀಸಲಾದ ಲೋಕವಾಗಿದೆ.
ಅತಳ: ಮಾಯೆಯ ಮಗನಾದ ಬಾಲನು ಈ ಅತಳ ಲೋಕದಲ್ಲಿ ನೆಲೆಸಿದ್ದಾನೆ. ಶಿವನ ರೂಪವಾದ ಹಟಕೇಶ್ವರನು ಕೂಡ ಈ ಲೋಕದಲ್ಲೇ ನೆಲೆಸಿದ್ದಾನೆ ಎಂದು ಪುರಾಣಗಳು ಹೇಳುತ್ತದೆ.
ವಿತಳ: ತಪ್ಪುಗಳನ್ನು ಕೂಡ ಸರಿಯೆಂದು ತಿಳಿದುಕೊಂಡಿರುವ ವಿತಳ ಲೋಕವನ್ನು ಹಟಕನು ಆಳ್ವಿಕೆ ನಡೆಸುತ್ತಾನೆ. ಇನ್ನು ಈ ರಾಜ್ಯವು ಸಂಪತ್ತಿನ ಕ್ಷೇತ್ರವಾಗಿಯು ಇದೆ.
ಸುತಳ: ಧರ್ಮನಿಷ್ಠ ರಾಕ್ಷಸ ರಾಜನಾದ ಮಹಾಬಲಿಯು ಸುತಳ ಲೋಕದಲ್ಲಿ ನೆಲೆಸಿದ್ದಾನೆ. ಈ ಲೋಕವು ಪರೋಪಕಾರಿ ಮಹಾಬಲಿಯ ಪುಣ್ಯ ರಾಜ್ಯವಾಗಿದೆ.
ರಸಾತಳ: ಕ್ರೂರ ರಾಕ್ಷಸರು ಹಾಗೂ ಸರ್ಪಗಳು ವಾಸಿಸುವ ಈ ಲೋಕವನ್ನು ಶುಕ್ರಾಚಾರ್ಯರು ಮುನ್ನಡೆಸುತ್ತಾರೆ. ಇಲ್ಲಿ ವ್ಯಕ್ತಿಗಳು ಸರಿ, ತಪ್ಪುಗಳ ಅಂತರವನ್ನು ತಿಳಿಯದೇ ತಮಗೆ ಮನಬಂದಂತೆ ವರ್ತಿಸುತ್ತಾರೆ.
ತಲಾತಳ: ಮಾಯಾ ಎನ್ನುವ ರಾಕ್ಷಸನಿಂದ ಆಳ್ವಿಕೆ ಮಾಡುವ ಲೋಕವಾಗಿರುವ ತಲಾತಳವದಲ್ಲಿರುವ ರಾಕ್ಷರನ್ನು ವಾಸ್ತುಶಿಲ್ಪಿಯೆಂದು ಕರೆಯಲಾಗುತ್ತದೆ.
ಮಹಾತಳ: ತಕ್ಷಕ, ಖುಕ ಮತ್ತು ಕಾಳಿಯಾ ಮುಂತಾದ ಅನೇಕ ತಲೆಗಳನ್ನು ಹೊಂದಿರುವ ದೈತ್ಯ ಹಾವುಗಳು ವಾಸಿಸುತ್ತವೆ.
ಪಾತಾಳ: ವಾಸಕಿ ದೇವನು ಆಳ್ವಿಕೆ ನಡೆಸುವ ಪಾತಾಳ ಲೋಕದಲ್ಲಿನ ನಿವಾಸಿಗಳು ದ್ವೇಷ, ಕ್ರೂರತೆ ಮತ್ತು ಕೋಪದಿಂದ ತುಂಬಿರುತ್ತಾರೆ.