PARENTING | ಭಾರತದಲ್ಲಿ ಹೆಚ್ಚಾಗ್ತಿದೆ ಹೋಮ್​ ಸ್ಕೂಲಿಂಗ್ ಪದ್ಧತಿ! ಹಾಗಂದ್ರೇನು? ಇಲ್ಲಿದೆ ಡಿಟೇಲ್ಸ್

ಇತ್ತೀಚಿನ ದಿನಗಳಲ್ಲಿ ಭಾರತದ ತಾಯಂದಿರು ಹೋಮ್​ ಸ್ಕೂಲಿಂಗ್ ಪದ್ದತಿಯ ಮೊರೆ ಹೋಗುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳಿಗೆ ಮನೆಯಲ್ಲೇ ಶಿಕ್ಷಣ ನೀಡುವ ಪರ್ಯಾಯ ವಿಧಾನವೇ ಈ ಹೋಮ್​ ಸ್ಕೂಲಿಂಗ್. ಇವತ್ತು ಈ ಹೋಮ್​ ಸ್ಕೂಲಿಂಗ್ ಎಂದರೇನು? ಇದರಿಂದ ಮಕ್ಕಳಿಗೇನು ಲಾಭ ಎನ್ನುವುದನ್ನು ತಿಳಿದುಕೊಳ್ಳೋಣ.

ಹೋಮ್​ ಸ್ಕೂಲಿಂಗ್ ಮಕ್ಕಳಿಗೆ ಅವರೇ ಬೇಗ ಅಥವಾ ನಿಧಾನವಾಗಿ ಕಲಿಯಲು, ಮತ್ತು ತಮ್ಮ ಆಸಕ್ತಿಗಳನ್ನು ಅನುಸರಿಸಲು ಅವಕಾಶ ನೀಡುತ್ತದೆ. ಹೋಮ್​ ಸ್ಕೂಲಿಂಗ್ ನಲ್ಲಿ ಮಕ್ಕಳು ಸ್ವತಃ ಎದ್ದು, ತಮ್ಮ ದಿನವನ್ನು ಆರಂಭಿಸುತ್ತಾರೆ. ಬೇಗನೆ ಸಿದ್ಧವಾಗಬೇಕೆಂಬ ಒತ್ತಡವಿಲ್ಲ. ಅದರ ಬದಲಿಗೆ, ಹಗಲಿನ ಸಮಯದಲ್ಲಿ ಮಕ್ಕಳ ಆಸಕ್ತಿಯ ಮೇರೆಗೆ ಆಟ, ಸಂಗೀತ, ಚಿತ್ರಕಲೆ, ಪಾಠದ ಜೊತೆಗೆ ಕಲಿಯಬಹುದು.

ಭಾರತದ 2009ರ ಶಿಕ್ಷಣ ಹಕ್ಕು ಕಾಯ್ದೆ (RTE) ಪ್ರಕಾರ, 6-14 ವರ್ಷ ವಯಸ್ಸಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯ ಆದರೆ, ಶಾಲೆಯಲ್ಲಿಯೇ ಕಲಿಯಬೇಕು ಎಂಬ ನಿಯಮವಿಲ್ಲ. National Institute of Open Schooling (NIOS) ಮತ್ತು EPathshala ಹೋಂಸ್ಕೂಲಿಂಗ್ ಪೋಷಕರಿಗೆ ಪಠ್ಯಕ್ರಮ ಮತ್ತು ಪ್ರಮಾಣಪತ್ರದ ಆಯ್ಕೆಯನ್ನು ನೀಡುತ್ತವೆ.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ಪದ್ಧತಿ ಜನಪ್ರಿಯವಾಗಿದೆ. ಹಾಗೆಯೇ, ಇದು ಭಾರತದಲ್ಲೂ ಹೊಸ ಪರ್ಯಾಯ ಶಿಕ್ಷಣ ವ್ಯವಸ್ಥೆ ಆಗಿ ಬೆಳೆಯುತ್ತಿದೆ.

ಪೋಷಕರು ಹೋಂಸ್ಕೂಲಿಂಗ್ ಆಯ್ಕೆ ಮಾಡುವುದಕ್ಕೆ ಮುಖ್ಯ ಕಾರಣ ಏನು?

ಕಟ್ಟುನಿಟ್ಟಾದ ದಿನಚರಿ ಬಗ್ಗೆ ಬೇಸರ

ಮಕ್ಕಳು ತಮ್ಮ ಸ್ವಂತ ಆಸಕ್ತಿಗಳನ್ನು ಅನ್ವೇಷಿಸುತ್ತಾರೆ ಎಂಬ ಭಾವನೆ

ಹೆಚ್ಚಿನ ಶಾಲಾ ಶುಲ್ಕವನ್ನು ತಪ್ಪಿಸಬಹುದು

ಮಕ್ಕಳ ಬಾಲ್ಯದ ಪ್ರಮುಖ ಹಂತಗಳಲ್ಲಿ ಪೋಷಕರೇ ಮಾರ್ಗದರ್ಶನ ನೀಡುವ ಇಚ್ಛೆ

ಮೊಂಟೆಸರಿ ತತ್ವದಂತೆ ಮಕ್ಕಳಿಗೆ ಆಟದ ಮೂಲಕ ಕಲಿಯಲು ಅವಕಾಶ

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!