“ಚಿರಂಜೀವಿ” ಎಂಬ ಸಂಸ್ಕೃತ ಪದವು ಅಮರ ಎಂಬ ಅರ್ಥವನ್ನು ನೀಡುತ್ತದೆ. ಹಿಂದು ಸಿದ್ಧಾಂತದ ಪ್ರಕಾರ, ಚಿರಂಜೀವಿಗಳು ಈ ಕಲಿಯುಗದ ಮೂಲಕ ಕಾಲದ ಅಂತ್ಯದವರೆಗೆ ಭೂಮಿಯ ಮೇಲೆ ನಡೆಯುವ ಅಮರ ಜೀವಿಗಳು. ಪುರಾಣದಲ್ಲಿ 7 ಜನರನ್ನ ಚಿರಂಜೀವಿಗಳು ಎನ್ನಲಾಗುತ್ತದೆ. ಆ ಚಿರಂಜೀವಿಗಳು ಯಾರು ಎಂಬ ಮಾಹಿತಿ ಇಲ್ಲಿದೆ.
ಅಶ್ವತ್ಥಾಮ
ಅಶ್ವತ್ಥಾಮ ಪೌರಾಣಿಕ ಯೋಧ ಮತ್ತು ಶಿಕ್ಷಕ ಮಾತ್ರವಲ್ಲದೇ ದ್ರೋಣಾಚಾರ್ಯರ ಮಗನಾಗಿ ಸಹ ಪ್ರಸಿದ್ಧನಾಗಿದ್ದಾನೆ. ಅಸಾಧಾರಣ ಯುದ್ಧ ಕೌಶಲ್ಯ ಮತ್ತು ತನ್ನ ಸ್ನೇಹಿತ ದುರ್ಯೋಧನನ ಮೇಲಿನ ನಿಷ್ಠೆಗೆ ಹೆಸರುವಾಸಿಯಾಗಿದ್ದನೆ. ತನ್ನ ಸ್ನೇಹಿತನ ಮೇಲಿನ ಅಚಲ ನಿಷ್ಠೆಯು ಅವನಿಗೆ ಕೊನೆಯವರೆಗೂ ದುಃಖದ ದೀರ್ಘ ಜೀವನವನ್ನು ನಡೆಸಲು ಶಾಪವಾಯಿತು.
ಮಹಾಬಲಿ
ಮಹಾಬಲಿಯು ದೇವಾಂಬಾ ಮತ್ತು ವಿರೋಚನನ ಮಗ. ವಿಷ್ಣು ವಾಮನ ರೂಪದಲ್ಲಿ ಬಂದು ರಾಜ ಬಲಿಯಿಂದ ಮೂರು ಅಡಿ ಭೂಮಿಯನ್ನು ಉಡುಗೊರೆಯಾಗಿ ಪಡೆದನು. ಬಲಿ ಕೊಟ್ಟ ಮಾತನ್ನು ಉಳಿಸಿ ಮೂರು ಅಡಿ ಭೂಮಿಯನ್ನು ವಿಷ್ಣುವಿಗೆ ಕೊಟ್ಟನು.
ಪರಶುರಾಮ
ಭಗವಾನ್ ಪರಶುರಾಮನು ವಿಷ್ಣುವಿನ ಆರನೇ ಅವತಾರ. ಪರಶುರಾಮನು ಕೊನೆಯ ಮತ್ತು ಅತ್ಯಂತ ಶಕ್ತಿಶಾಲಿ ವಿಷ್ಣು ಅವತಾರವಾದ ಕಲ್ಕಿಗೆ ಮಾರ್ಗದರ್ಶಕ ಮತ್ತು ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾನೆ ಎಂದು ಪುರಾಣಗಳು ಹೇಳುತ್ತವೆ.
ವಿಭೀಷಣ
ರಾವಣನ ಸಹೋದರ ವಿಭೀಷಣ ಸ್ವತಃ ರಾಕ್ಷಸನಾಗಿದ್ದರೂ, ಒಳ್ಳೆಯ ಹೃದಯವನ್ನು ಹೊಂದಿದ್ದನು. ರಾವಣನ ಮೇಲಿನ ವಿಜಯದ ನಂತರ ಭಗವಾನ್ ರಾಮನು ವಿಭೀಷಣನನ್ನು ಲಂಕಾದ ರಾಜನಾಗಿ ಮಾಡುತ್ತಾನೆ. ಅಲ್ಲದೇ, ದೀರ್ಘಾಯುಷ್ಯವನ್ನು ನೀಡಿದನೆಂದು ಸಹ ಹೇಳಲಾಗುತ್ತದೆ.
ಕೃಪಾಚಾರ್ಯ
ಕೃಪಾಚಾರ್ಯ, ಮಹಾಭಾರತದ ಮಹಾಕಾವ್ಯದಲ್ಲಿ ಪ್ರಮುಖ ವ್ಯಕ್ತಿ. ಅವರು ಸಮರ ಕಲೆಗಳಲ್ಲಿ ಅದ್ಭುತವಾದ ಕೌಶಲ್ಯವನ್ನು ಪಡೆದರು.
ವೇದವ್ಯಾಸ
ಹಿಂದು ಧರ್ಮಗ್ರಂಥಗಳ ಪ್ರಕಾರ, ವ್ಯಾಸರು ಮಾನವೀಯತೆಗೆ ಸಹಾಯ ಮಾಡುವುದನ್ನು ಮುಂದುವರಿಸಲು ಪ್ರಸ್ತುತ ಕಲಿಯುಗದ ಕೊನೆಯವರೆಗೂ ಭೂಮಿಯ ಮೇಲೆ ಇರಲು ನಿರ್ಧರಿಸಿದ್ದಾರೆ.
ಹನುಮಂತ
ಎಲ್ಲರಿಗೂ ಗೊತ್ತಿರುವಂತೆ ಹನುಮಂತನನ್ನ ಚಿರಂಜೀವಿ ಎಂದು ಕರೆಯಲಾಗುತ್ತದೆ. ಹನುಮಂತನನ್ನ ಶ್ರೀರಾಮನ ಭಕ್ತ ಎಂದು ಪರಿಗಣಿಸಲಾಗುತ್ತದೆ. ಸೂರ್ಯ ಹಾಗೂ ವಾಯುವಿನ ಕಾರಣದಿಂದ ಅಮರತ್ವ ಪ್ರಾಪ್ತಿಯಾಗಿದೆ ಎನ್ನಲಾಗುತ್ತದೆ.