ಹಳ್ಳಿಕಾರ್ ತಳಿ ಸಂವರ್ಧನಾ ಕ್ಷೇತ್ರಕ್ಕೆ ಎನ್. ರವಿಕುಮಾರ್ ಭೇಟಿ

ಹೊಸದಿಗಂತ ವರದಿ ತುಮಕೂರು:

ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್ ರವಿಕುಮಾರ್ ಅವರು ಇಂದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕುಣಿಕೇನಹಳ್ಳಿಯ ಸುಮಾರು 927 ಏಕರೆ ಪ್ರದೇಶದ ಹಳ್ಳಿಕಾರ್ ತಳಿ ಸಂವರ್ಧನಾ ಕ್ಷೇತ್ರಕ್ಕೆ ಭೇಟಿ ನೀಡಿದರು.

ನಶಿಸಿ ಹೋಗುತ್ತಿರುವ ಹಾಗೂ ದೇಶದ ಉತ್ತಮ ಉಳುಮೆ ಯೋಗ್ಯ ತಳಿಯೇ ಈ ಹಳ್ಳಿಕಾರ್ ತಳಿ ಆಗಿದೆ.

ಈ ಕೇಂದ್ರದ ಮೂಲಭೂತ ಸೌಕರ್ಯ, ಹಳ್ಳಿಕಾರ ತಳಿಗಳಿಗೆ ನೀಡುತ್ತಿರುವ ಮೇವು, ಆಹಾರ ಪದ್ಧತಿ, ಸಾಕಾಣಿಕೆ, ರೈತರಿಗೆ ಉಪಯೋಗ ಸೇರಿದಂತೆ ಅನೇಕ ವಿಷಯಗಳ ಕುರಿತು ಪರಿಶೀಲಿಸಿದರು.

ಈ ಹಳ್ಳಿಕಾರ ತಳಿಯ ಬಗ್ಗೆ ಪರಿಷತ್ ಕಲಾಪದಲ್ಲಿ ಬಗ್ಗೆ ಚರ್ಚಿಸಿ ಹೆಚ್ಚಿಗೆ ಸಹಾಯಧನ, ಖಾಯಂ ಸಿಬ್ಬಂದಿ, ಹಳ್ಳಿಕಾರ ತಳಿಯ ಹೈನೋತ್ಪಾದನಾ ಆಹಾರದ ಬಗ್ಗೆ ಜಾಗೃತಿ, ಹಳ್ಳಿಕಾರ ತಳಿಯ ಬಗ್ಗೆ ರೈತರಿಗೆ ಯೋಜನೆಗಳು ಕುರಿತು ಸರ್ಕಾರದ ಗಮನ ಸೆಳೆಯುತ್ತೇನೆಂದು ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!