ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಜಂಬೂ ಸವಾರಿಗೆ ಚಾಲನೆ ಸಿಗಲಿದೆ.
ಈಗಾಗಲೇ ಜಂಬೂ ಸವಾರಿಗೆ ಎಲ್ಲಾ ಸಿದ್ಧತೆಗಳು ನಡೆದಿದ್ದು, ಅಭಿಮನ್ಯು ಆನೆ 750 ಕೆ.ಜಿಯ ಅಂಬಾರಿಯನ್ನು ಹೊತ್ತಿದ್ದಾನೆ.ಅಭಿಮನ್ನುವಿಗೆ ಕುಮ್ಕಿ ಆನೆಗಳಾಗಿ ಹಿರಣ್ಯ ಮತ್ತು ಲಕ್ಷ್ಮಿ ಸಾಥ್ ನೀಡಲಿದೆ.
ಅದೇ ರೀತಿಯಾಗಿ ಆನೆಯಾಗಿ ಧನಂಜಯ ಸಾಲಗಳಾಗಿ ಗೋಪಿ, ಮಹೇಂದ್ರ, ಸುಗ್ರೀವ, ಏಕಲವ್ಯ ಮತ್ತು ಪ್ರಶಾಂತ ಆನೆಗಳು ಭಾಗವಹಿಸಿವೆ. ಇನ್ನು ರಾಜ ಮನೆತನದ ದಸರೆಯಲ್ಲಿ ಭೀಮ ಮತ್ತು ಕಂಜನ್ ಆನೆಗಳು ಸೇರಿದಂತೆ ಒಟ್ಟು 9 ಆನೆಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ.