ಹೊಸದಿಗಂತ ವರದಿ, ಮಂಗಳೂರು:
ನಕಲಿ ವಿಳಾಸದ ದಾಖಲೆಯ ಮೂಲಕ ಪಾಸ್ ಪೋರ್ಟ್ ಪಡೆದು ದುಬೈಗೆ ಹಾರಲು ಯತ್ನಿಸಿದ ಬಾಂಗ್ಲಾ ಪ್ರಜೆಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದು ಬಜಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೊಹಮ್ಮದ್ ಮಾಣಿಕ್ ಹುಸೈನ್ (26) ಎಂಬಾತ ಗುರುವಾರ ಉಡುಪಿ ಗುಜ್ಜರಬೆಟ್ಟು ನಿವಾಸಿ ಎಂದು ನಕಲಿ ದಾಖಲೆ ನೀಡಿ ಪಡೆದ ಪಾಸ್ ಪೋರ್ಟ್ ಮೂಲಕ ಇಂಡಿಗೋ ವಿಮಾನದಲ್ಲಿ ದುಬೈಗೆ ಪ್ರಯಾಣಿಸಲು ವಿಮಾನ ನಿಲ್ದಾಣದಕ್ಕೆ ಆಗಮಿಸಿದ್ದು, ವಿಮಾನ ನಿಲ್ದಾಣದ ಇಮಿಗ್ರೆಷನ್ ಅಧಿಕಾರಿಗಳ ವಿಚಾರಣೆ ವೇಳೆ ಈತನು ಬಾಂಗ್ಲಾದೇಶಿ ಪ್ರಜೆಯಾಗಿದ್ದು ಅಕ್ರಮವಾಗಿ ಪಶ್ಚಿಮ ಬಂಗಾಲದ ಗಡಿ ಮೂಲಕ ಭಾರತಕ್ಕೆ ಪ್ರವೇಶಿಸಿದ್ದನು.
ಸುಮಾರು 5 ವರ್ಷ ಗಳಿಂದ ಉಡುಪಿ ಯಲ್ಲಿ ನೆಲೆಸಿ ಕಟ್ಟಡ ಕಾರ್ಮಿಕ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಬಗ್ಗೆ ಹುಸೈನ್ ಬಾಯಿ ಬಿಟ್ಟಿದ್ದಾನೆ. ವಿಮಾನ ನಿಲ್ದಾಣ ಅಧಿಕಾರಿಗಳು ನೀಡಿದ ದೂರಿನ ಆಧಾರದಲ್ಲಿ ಬಜಪೆ ಠಾಣೆಯಲ್ಲಿ ಮೊಹಮ್ಮದ್ ಮಾಣಿಕ್ ಹುಸೈನ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.