ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸೋಭಿತಾ ಧುಲಿಪಾ ಹಾಗೂ ನಾಗಚೈತನ್ಯ ಇಂದು ಬೆಳಗ್ಗೆ ಹಸೆಮಣೆ ಏರಿದ್ದಾರೆ. ಸಮಂತಾ ಜತೆಗಿನ ಡಿವೋರ್ಸ್ ನಂತರ ಸೋಭಿತಾ ಜೊತೆ ನಾಗಚೈತನ್ಯ ಹಲವು ಬಾರಿ ಕಾಣಿಸಿಕೊಂಡಿದ್ದರು. ವರ್ಷಗಳ ಡೇಟಿಂಗ್ ನಂತರ ಇದೀಗ ಜೋಡಿ ಮದುವೆಯ ಬಂಧನದಲ್ಲಿ ಒಂದಾಗಿದೆ.
ನಾಗ ಚೈತನ್ಯ ಹಾಗೂ ಶೋಭಿತಾ ಅವರು ‘ಅನ್ನಪೂರ್ಣ ಸ್ಟುಡಿಯೋ’ದಲ್ಲಿ ಮದುವೆ ಆಗಿದ್ದಾರೆ. ಅಕ್ಕಿನೇನಿ ನಾಗೇಶ್ವರ ರಾವ್ ನಿರ್ಮಾಣದ ಈ ಸ್ಟುಡಿಯೋದಲ್ಲಿ ನಾಗ ಚೈತನ್ಯ ಅವರು ತಾತನಿಗೆ ಗೌರವ ಸಲ್ಲಿಕೆ ಮಾಡಿದರು.
ನಾಗ ಚೈತನ್ಯ ಹಾಗೂ ಶೋಭಿತಾ ಇಬ್ಬರೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಮಧ್ಯೆ ಪರಿಚಯ ಬೆಳೆದು ಈಗ ಮದುವೆ ಆಗಿ ಹೊಸ ಜೀವನ ಆರಂಭಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ದಂಪತಿಗೆ ಶುಭಾಶಯ ಕೋರಿದ್ದಾರೆ.