Monday, October 2, 2023

Latest Posts

CINE| ರಜನಿಕಾಂತ್ ಜೈಲರ್ ಸಿನಿಮಾದಲ್ಲಿ ಮೆಗಾ ಬ್ರದರ್ ಸ್ಪೆಷಲ್‌ ಅಟ್ರಾಕ್ಷನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಇಂದು ಅದ್ದೂರಿ ತೆರೆ ಕಂಡಿದೆ. ತಮನ್ನಾ, ಕನ್ನಡದ ಸ್ಟಾರ್ ಹೀರೋ ಶಿವರಾಜ್‌ಕುಮಾರ್, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್, ಜಾಕಿ ಶ್ರಾಫ್, ರಮ್ಯಾ ಕೃಷ್ಣ, ಸುನೀಲ್ ಮುಂತಾದ ಸ್ಟಾರ್ ನಟರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ತಮಿಳುನಾಡು, ಕೇರಳದಲ್ಲಿ ಈಗಾಗಲೇ ಹಲವೆಡೆ ಜೈಲರ್ ಮುಂಜಾನೆ ಶೋಗಳು ನಡೆದಿವೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್, ಜಾಕಿ ಶ್ರಾಫ್, ಮೋಹನ್ ಲಾಲ್, ಸುನೀಲ್ ಜೊತೆಗೆ ಮೆಗಾ ಬ್ರದರ್ ನಾಗಬಾಬು ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಏನೆಲ್ಲಾ ಶೇರ್ ಮಾಡ್ತಾ ಇದ್ದಾರೆ ಅಂತ ಸ್ವತಃ ನಾಗಬಾಬು ಅವರೇ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹೇಳಿದ್ದಾರೆ.

ಜೈಲರ್ ಚಿತ್ರದ ಚಿತ್ರೀಕರಣದ ವೇಳೆ ರಜನಿಕಾಂತ್ ಜೊತೆಗಿನ ಫೋಟೋವನ್ನು ಪೋಸ್ಟರ್‌ಗಳ ಜೊತೆಗೆ ವಿಡಿಯೋ ರೂಪದಲ್ಲಿ ತಮ್ಮ ವಾಯ್ಸ್ ಓವರ್‌ನೊಂದಿಗೆ ಪೋಸ್ಟ್ ಮಾಡಿದ್ದಾರೆ. ಚಿಕ್ಕಂದಿನಿಂದಲೂ ರಜನಿಕಾಂತ್ ಅವರ ಅಭಿಮಾನಿಯಾಗಿದ್ದು, ಈಗ ರಜನಿಕಾಂತ್ ಜೊತೆ ಸೀನ್ ನಲ್ಲಿ ಕಾಣಿಸಿಕೊಂಡಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದ ಅವರು, ಜೈಲರ್ ದೊಡ್ಡ ಹಿಟ್ ಆಗಬೇಕು. ಇದರಿಂದ ಮೆಗಾ ಅಭಿಮಾನಿಗಳು ಖುಷಿಯಾಗಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!