ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ನಂತರವೂ ಈ ಜೋಡಿ ಒಂದಲ್ಲಾ ಒಂದು ದಿನ ಒಂದಾಗುತ್ತದೆ ಎಂದು ಕಾದಿದ್ದ ಫ್ಯಾನ್ಸ್‌ಗೆ ಕಹಿಸುದ್ದಿಯೊಂದು ಸಿಕ್ಕಿದೆ.
ಇಂದು ನಟಿ ಸೋಭಿತಾ ಧುಲಿಪಾಲ ಹಾಗೂ ನಾಗಚೈತನ್ಯ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗಿದೆ. 2021ರ ಅಕ್ಟೋಬರ್ ತಿಂಗಳಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಬೇರೆ ಆಗುವ ಬಗ್ಗೆ ಘೋಷಣೆ ಮಾಡಿದರು. ಇದಕ್ಕೆ ಕಾರಣ ಏನು ಎಂಬುದನ್ನು ಯಾರೂ ರಿವೀಲ್ ಮಾಡಿಲ್ಲ.
ಆ ಬಳಿಕ ನಾಗ ಚೈತನ್ಯ ಅವರು ಸೋಭಿತಾ ಜೊತೆ ಡೇಟಿಂಗ್ ಆರಂಭಿಸಿದರು. ಅನೇಕ ಬಾರಿ ಇವರು ಫ್ಯಾನ್ಸ್ ಕೈಗೆ ಸಿಕ್ಕಿ ಬಿದ್ದಿದ್ದೂ ಇದೆ. ಈಗ ಇವರು ತಮ್ಮ ಸಂಬಂಧವನ್ನು ಅಧಿಕೃತ ಮಾಡಲು ಹೊರಟಿದ್ದಾರೆ. ಇದನ್ನು ಯಾರೂ ಖಚಿತ ಪಡಿಸಿಲ್ಲ. ಟಾಲಿವುಡ್ ಅಂಗಳದಲ್ಲಿ ಹೀಗೊಂದು ಸುದ್ದಿ ಹರಿದಾಡುತ್ತಿದೆ.
ನಾಗ ಚೈತನ್ಯ ಹಾಗೂ ಸೋಭಿತಾ ಜೂನ್ ತಿಂಗಳಲ್ಲಿ ಯುರೋಪ್ ಪ್ರವಾಸ ತೆರಳಿದ್ದರು. ಈ ಫೋಟೋಗಳು ವೈರಲ್ ಆಗಿತ್ತು. ಇದರಿಂದ ಇವರು ಶೀಘ್ರವೇ ವಿವಾಹ ಆಗಲಿದ್ದಾರೆ ಅನ್ನೋದು ಖಚಿತ ಆಯಿತು. ಈಗ ಇವರು ನಿಶ್ಚಿತಾರ್ಥ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.