ರೈಲಿನಲ್ಲಿ ಸಿಕ್ಕ ಭೋಜನಕ್ಕೆ ಮನಸೋತ ನಾಗಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರೈಲು ಪ್ರಯಾಣ ವೇಳೆ ಸಿಗುವ ಒಂದು ಸುಂದರವಾದ ಅನುಭವ ಸದಾ ನೆನೆಪಿನಲ್ಲಿರುತ್ತದೆ. ಅದು ಯಾವುದು ಆಗಿರಬಹುದು . ಕೆಲವುಮ್ಮೆ ರೈಲಿನಲ್ಲಿ ಸಿಗುವ ಟೀ ಕಾಫಿ ಊಟ ಕೆಲವೊಮ್ಮ ಮನಸ್ಸಿನ ನೆಮ್ಮದಿ ಕೆಡಿಸುತ್ತವೆ. ಆದರೆ ಇತ್ತೀಚೆಗೆ ರೈಲಿನ ಆಹಾರ ವ್ಯವಸ್ಥೆಯಲ್ಲೂ ಸಾಕಷ್ಟು ಬದಲಾವಣೆ ಆಗಿದ್ದು, ಶುಚಿ ರುಚಿಯಾದ ಆಹಾರ ಸಿಗುತ್ತಿವೆ ಎಂದು ಕೆಲವು ರೈಲು ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅದೇ ರೀತಿ ನಾಗಲ್ಯಾಂಡ್ ಶಾಸಕ ತೆಮ್ಜೆನ್ ಇಮ್ನಾ ಅವರು ಟ್ವಿಟ್ಟರ್‌ನಲ್ಲಿ ರೈಲಿನಲ್ಲಿ ನೀಡುವ ಆಹಾರದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಜ್ಯದ ಉನ್ನತ ಶಿಕ್ಷಣ ಸಚಿವ ಹಾಗೂ ಬುಡಕಟ್ಟು ವ್ಯವಹಾರಗಳ ಸಚಿವರು ಆಗಿರುವ ತೆಮ್ಜೆನ್ ಇಮ್ನಾ ಅವರು, ತಮಗೆ ರೈಲಿನಲ್ಲಿ ನೀಡಿದ ಊಟದ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅವರು ಅಸ್ಸಾಂನ ಗುವಾಹಟಿಯಿಂದ ನಾಗಲ್ಯಾಂಡ್‌ನ ದಿಮಾಪುರ ನಗರಕ್ಕೆರಾಜಧಾನಿ ರೈಲಿನಲ್ಲಿ ಸಂಚರಿಸುತ್ತಿದ್ದರು. ರೈಲಿನಲ್ಲಿ ಇವರಿಗೆ ನೀಡಿದ ಊಟದಲ್ಲಿ ಚಿಕನ್ ಕರ್ರಿ, ದಾಲ್‌, ಚಪಾತಿ, ಅನ್ನ ಅಂಬ್ಲೆಟ್‌, ಮೊಸರು ಹಾಗೂ ಉಪ್ಪಿನಕಾಯಿಯನ್ನು ನೀಡಲಾಗಿತ್ತು. ರೈಲಿನಲ್ಲಿ ನೀಡಿದ ಈ ಸುಂದರವಾದ ರಾತ್ರಿಯ ಭೋಜನಕ್ಕೆ ಸಂತಸ ಹಾಗೂ ಪ್ರಶಂಸೆ ವ್ಯಕ್ತಪಡಿಸಿದ ನಾಗಲ್ಯಾಂಡ್ ಸಚಿವರು ಈ ಭೋಜನದ ಫೋಟೋ ತೆಗೆದು ಕೇಂದ್ರ ರೈಲ್ವೆ ಸಚಿವ ಹಾಗೂ ರೈಲ್ವೆ ಸಚಿವಾಲಯಕ್ಕೆ ಟ್ಯಾಗ್‌ ಮಾಡಿ ಪೋಸ್ಟ್ ಮಾಡಿದ್ದಾರೆ.

ಜೀವನವೊಂದು ಪ್ರಯಾಣ, ಪ್ರವಾಸವನ್ನು ಆನಂದಿಸಿ, ಆಹಾರವೇ ಜೀವನ , ಹಾಗಾಗಿ ಎಂದಿಗೂ ಭೋಜನವನ್ನು ತಪ್ಪಿಸಿಕೊಳ್ಳಬೇಡಿ. ದಿಮಾಪುರದಿಂದ ಗುವಾಹಟಿಗೆ ಹೋಗುವ ವೇಳೆ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನೀಡಿದ ಸೊಗಸಾದ ಆಹಾರಕ್ಕೆ ಕೃತಜ್ಞನಾಗಿದ್ದೇನೆ ಎಂದು ಅವರು ಟ್ವಿಟ್ಟರ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸಾವಿರಾರು ಜನ ಈ ಟ್ವಿಟ್‌ನ್ನು ಲೈಕ್ ಮಾಡಿದ್ದಾರೆ. ಅಲ್ಲದೇ ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಆಹಾರದ ಗುಣಮಟ್ಟ ಚೆನ್ನಾಗಿರುವುದಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!