July 23, 2026
Thursday, July 23, 2026
spot_img

ಬೆಂಗಳೂರಿನ ಮೇನ್‌ ರೋಡ್‌ನಲ್ಲೇ ಹೆಡೆಯೆತ್ತಿ ನಿಂತ ನಾಗರಾಜ, ಮುಕ್ಕಾಲು ಗಂಟೆ ಟ್ರಾಫಿಕ್‌ ಜಾಮ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಯ ಸುತ್ತಾಮುತ್ತ, ಹಳ್ಳಿಗಳಲ್ಲಿ ಹಾವುಗಳು ಕಾಣಿಸುವುದು ಸಾಮಾನ್ಯ. ಆದರೆ ಜನನಿಬಿಡ ಪ್ರದೇಶದಲ್ಲಿ ಹಾವು ಪ್ರತ್ಯಕ್ಷವಾಗಿ ನಿಂತುಬಿಟ್ರೆ? ಬೆಂಗಳೂರಿನ ಮುಖ್ಯರಸ್ತೆಯೊಂದರಲ್ಲಿಯೇ ನಾಗರಹಾವೊಂದು ಹೆಡೆ ಎತ್ತಿ ನಿಂತುಬಿಟ್ಟಿದ್ದು, ಮುಕ್ಕಾಲು ಗಂಟೆ ಟ್ರಾಫಿಕ್‌ ಜಾಮ್‌ ಆಗಿದೆ.

ಪ್ಯಾಲೇಸ್‌ ರಸ್ತೆಯಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಬೈಕ್‌ ಸವಾರರು ಹೆದರಿದ್ದಾರೆ. ನಾಗರಾಜ 30-40 ನಿಮಿಷ ಪ್ಯಾಲೇಸ್ ರಸ್ತೆ ಸಂಚಾರಕ್ಕೆ ಸ್ವಲ್ಪ ಅಡಚಣೆ ಉಂಟು ಮಾಡಿದ್ದ. ಬೃಹತ್ ವಾಹನಗಳ ಸಂಚಾರಕ್ಕೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಉಂಟಾಗಿತ್ತು. ಹಾವು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪಿ ಹಾವನ್ನು ರಕ್ಷಣೆ ಮಾಡಿದ ನಂತರ ಟ್ರಾಫಿಕ್‌ ನಿಯಂತ್ರಣಕ್ಕೆ ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !