ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮಹಿಳೆಯರ ಬೆತ್ತಲ ಮೆರವಣಿಗೆ ಮಾಡಿ, ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಈ ವಿಡಿಯೋಗಳು ಮತ್ತಷ್ಟು ಶೇರ್ ಆಗದಂತೆ ತಡೆಯಲು ಕೇಂದ್ರ ಕ್ರಮ ತೆಗೆದುಕೊಂಡಿದೆ.
ಟ್ವಿಟರ್ ಹಾಗೂ ಇನ್ನಿತರ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಈ ವಿಡಿಯೋ ಶೇರ್ ಆಗದಂತೆ ನೋಡಿಕೊಳ್ಳಲು ಹೇಳಿದೆ. ಭಾರತೀಯ ಕಾನೂನುಗಳಿಗೆ ಬದ್ಧವಾಗಿರುವಂತೆ ಸರ್ಕಾರ ತಿಳಿಸಿದೆ.
ಮಣಿಪುರದ ಕುಕಿ-ಜೋಮಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ತನಿಖೆ ಆರಂಭವಾಗಿದೆ.