ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಅತ್ಯಾಚಾರ ಎಸಗಿ ನಗ್ನ ಮೆರವಣಿಗೆ ಪ್ರಕರಣದಲ್ಲಿ ಒಟ್ಟಾರೆ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ದೇಶಾದ್ಯಂತ ಈ ಬಗ್ಗೆ ಚರ್ಚೆಯಾಗಿದ್ದು, ಪ್ರಧಾನಿ ಮೋದಿ ಈ ಘಟನೆಯಿಂದ ಮನಸ್ಸಿಗೆ ನೋವುಂಟಾಗಿದೆ, ಮನಸ್ಸು ಕೋಪದಿಂದ ಕುದಿಯುತ್ತಿದೆ. ಆರೋಪಿಗಳನ್ನು ಸುಮ್ಮನೆ ಬಿಡುವ ಮಾತೇ ಇಲ್ಲ ಎಂದಿದ್ದರು.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹುಯಿರೆಮ್ ಹೆರದಾಸ್ ಸಿಂಗ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಹಸಿರು ಬಣ್ಣದ ಶರ್ಟ್ ಹಾಕಿದ್ದು, ಮಹಿಳೆಯ ಖಾಸಗಿ ಅಂಗಕ್ಕೆ ಕೈ ಇಟ್ಟು ನಡೆದು ವಿಕೃತಿ ತೋರಿದ್ದ.
ಅಪರಾಧ ನಡೆದಿದ್ದು, ನಿನ್ನೆ ಮೊನ್ನೆಯಲ್ಲ ಬರೋಬ್ಬರಿ 70 ದಿನಗಳ ಹಿಂದೆ. ಇಷ್ಟು ಸಮಯವಾದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರ ವಿರುದ್ಧ ಜನ ತಿರುಗಿಬಿದ್ದಿದ್ದಾರೆ. ಹೆರದಾಸ್ ಮನೆಗೆ ಸ್ಥಳೀಯರು ಬೆಂಕಿ ಇಟ್ಟಿದ್ದಾರೆ. ಇನ್ನುಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.