ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯ್ಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಳಿಕ ಅನೇಕ ಗಣ್ಯರು ಬಾಲ ರಾಮನ ದರುಶನ ಪಡೆಯುತ್ತಲೇ ಇದ್ದಾರೆ. ಇದೀಗ ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲು ಮತ್ತು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರು ಸಕುಟುಂಬಿಕರಾಗಿ ಅಯೋಧ್ಯೆ ಜನ್ಮಭೂಮಿ ರಾಮ ಮಂದಿರಕ್ಕೆ ಭೇಟಿ ನೀಡಿ, ಬಾಲರಾಮನ ದರುಶನ ಪಡೆದರು.
ಟ್ರಸ್ಟ್ ವಿಶ್ವಸ್ತ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥರ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ಕಲಶ ಸೇವೆ ನೀಡಿ, ಶ್ರೀಗಳಿಂದ ರಜತ ಕಲಶವನ್ನು ಪ್ರಸಾದ ರೂಪವಾಗಿ ಪಡೆದರು.
ಈ ವೇಳೆ ಮಾಜಿ ಶಾಸಕ ರಘುಪತಿ ಭಟ್, ಚಿತ್ರನಟ ರಕ್ಷಿತ್ ಶೆಟ್ಟಿ ಮುಂತಾದವರಿದ್ದರು.