ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಟಲಿ ಸರಕಾರವು ದೇಶದ ಅಧಿಕೃತ ಭಾಷೆಯನ್ನು ಮಾತ್ರ ಮಾತನಾಡಬೇಕು. ಇಂಗ್ಲೀಷ್ ಅಥವಾ ಇನ್ನಿತರ ಭಾಷೆಗಳನ್ನು ಬಳಸಬಾರದು ಎಂದು ಈ ಹಿಂದೆ ಹೇಳಿತ್ತು. ಇದೀಗ ಇಂತಹದೇ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ಮಸೀದಿಗಳನ್ನು ಹೊರತುಪಡಿಸಿ, ದೇಶದ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವಂತಿಲ್ಲ ಅಥವಾ ಪ್ರಾರ್ಥನೆ ಮಾಡುವಂತಿಲ್ಲ ಎಂದು ಹೊಸ ಮಸೂದೆಯನ್ನು ತಂದಿದೆ.
ಇಟಲಿಯಾನ್ ಸ್ಥಳೀಯ ಮಾಧ್ಯಮಗಳ ಪ್ರಕಾರ, ಜಾರ್ಜಿಯಾ ಮೆಲೋನಿಯ ನೇತೃತ್ವದ ಸರ್ಕಾರ ದೇಶದ ನಗರ ಯೋಜನೆಗಳಲ್ಲಿ ಮತ್ತು ಶಾಸನಗಳಿಗೆ ಸಂಬಂಧಿಸಿದಂತೆ ಪ್ರಮುಖ ತಿದ್ದುಪಡಿಯನ್ನು ತಂದಿದೆ. ಕರುಡು ಕಾನೂನಿ ಪ್ರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಮಾಜ್ ಮಾಡುವುದು ಅಥವಾ ಮಸೀದಿಯಾಗಿ ಪರಿವರ್ತಿಸುವುದನ್ನು ನಿಷೇಧಿಸಲಾಗಿದೆ.
ಈಗಾಗಲೇ ಎಲ್ಲ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಆದೇಶಕ್ಕೆ ತಕ್ಷಣದಿಂದಲ್ಲೇ ಜಾರಿಗೆ ಬರುವಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕೆ ಅಲ್ಲಿನ ಸಂಸತ್ತು ಸದಸ್ಯರು ಕೂಡ ಒಪ್ಪಿಗೆ ನೀಡಿದ್ದಾರೆ.
ಈ ಮಸೂದೆಗೆ ಸಂಬಂಧಿಸಿದಂತೆ ಟೊಮಾಸೊ ಫೋಟಿ ಮೊದಲು ಸಹಿ ಹಾಕಿದ್ದಾರೆ. ಈ ಮಸೂದೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಇದು ಸಾಂವಿಧಾನಿಕವಾಗಿ ನ್ಯಾಯಸಮ್ಮತವಲ್ಲ, ಇದು ಧಾರ್ಮಿಕ ಸ್ವಾತಂತ್ರ್ಯವನ್ನು ನಿರ್ಬಂಧಿಸುತ್ತದೆ ಎಂದು ಹೇಳಿದೆ.