ಮಹಾರಾಷ್ಟ್ರದ ಔರಂಗಾಬಾದ್, ಉಸ್ಮಾನಾಬಾದ್ ಜಿಲ್ಲೆಗಳ ಹೆಸರು ಮರುನಾಮಕರಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಇಂದು ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯದ ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಜಿಲ್ಲೆಗಳ ಹೆಸರುಗಳನ್ನು ಕ್ರಮವಾಗಿ ಛತ್ರಪತಿ ಸಂಭಾಜಿನಗರ ಮತ್ತು ಧಾರಶಿವ್ ಎಂದು ಬದಲಾಯಿಸುವ (Name Change) ಬಗ್ಗೆ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ್ದಾರೆ.

ಎರಡೂ ಜಿಲ್ಲೆಗಳು ಮರಾಠಾವಾಡ ಪ್ರದೇಶದ ಭಾಗವಾಗಿವೆ. ಮೊಘಲರ ಕಾಲದಲ್ಲಿ ನಾಮಕರ ಮಾಡಲಾಗಿದ್ದ ಈ ನಗರದ ಹೆಸರುಗಳನ್ನು ಬದಲಾವಣೆ ಮಾಡುವ ಪ್ರಸ್ತಾಪ ಹಿಂದಿನಿಂದಲೂ ಇತ್ತು. ಇದೀಗ ಅಧಿಕೃತಗೊಳಿಸಲಾಗಿದೆ.

ಔರಂಗಾಬಾದ್ ಮತ್ತು ಉಸ್ಮಾನಾಬಾದ್​​ ಪ್ರದೇಶ, ಜಿಲ್ಲೆಗಳು, ತಹಸಿಲ್​​ಗಳು ಮತ್ತು ಗ್ರಾಮಗಳನ್ನು ಕ್ರಮವಾಗಿ ‘ಛತ್ರಪತಿ ಸಂಭಾಜಿನಗರ’ ಮತ್ತು ‘ಧಾರಶಿವ್’ ಎಂದು ಮರುನಾಮಕರಣ ಮಾಡಲಾಗಿದೆ ಎಂದು ರಾಜ್ಯ ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ ಸಂತೋಷ್ ಗಾವ್ಡೆ ತಿಳಿಸಿದ್ದಾರೆ.

ಇನ್ನುಮುಖ್ಯಮಂತ್ರಿ ಏಕನಾಥ ಶಿಂಧೆ , ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಡ್ , ಉಪಮುಖ್ಯಮಂತ್ರಿ ಅಜಿತ್​ ಪವಾರ್​ ಅವರು ಇಂದು ಸಂಭಾಜಿನಗರ ಮತ್ತು ಧಾರಶಿವ್ ಮರುನಾಮಕರಣ ಫಲಕಗಳನ್ನು ಅನಾವರಣಗೊಳಿಸಿದರು. ಛತ್ರಪತಿ ಸಂಭಾಜಿನಗರ ಕಂದಾಯ ವಿಭಾಗವನ್ನು ಹೊಂದಿರುವ ಜಿಲ್ಲೆ, ಉಪವಿಭಾಗ, ತಾಲೂಕು, ಗ್ರಾಮ ಮತ್ತು ಧಾರಾಶಿವ್​ ಜಿಲ್ಲೆ ಉಪವಿಭಾಗ, ತಾಲೂಕು, ಗ್ರಾಮವನ್ನು ಮರುನಾಮಕರಣ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ ಮಹಾರಾಷ್ಟ್ರ) ಮರಾಠಿಯಲ್ಲಿ ಟ್ವೀಟ್​ ಮಾಡಿದೆ.

ರಾಜ್ಯ ಕಂದಾಯ ಇಲಾಖೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಕೆಲವು ತಿಂಗಳ ಹಿಂದೆ ಕೋರಲಾದ ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಸರ್ಕಾರ ಪರಿಗಣಿಸಿದೆ. ಉಪವಿಭಾಗ, ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೆಸರುಗಳನ್ನು ಬದಲಾಯಿಸಲು ನಿರ್ಧರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!