Monday, October 2, 2023

Latest Posts

ಚೀತಾಗಳ ಸಾವಿನ ಕಾರಣ ತಿಳಿಯಲು ನಮೀಬಿಯಾಗೆ ಅಧ್ಯಯನ ಪ್ರವಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಫ್ರಿಕನ್ ಚೀತಾಗಳು ಏಕೆ ಸಾಯುತ್ತಿವೆ? ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಸರಣಿ ಸಾವಿನ ಹಿಂದಿನ ನಿಜವಾದ ಕಾರಣವೇನು? ಆಫ್ರಿಕಾ ಮತ್ತು ಭಾರತದ ನಡುವಿನ ಹವಾಮಾನ ವ್ಯತ್ಯಾಸದಿಂದ ಚಿರತೆಗಳು ಸಾಯುತ್ತಿವೆಯೇ… ಅಥವಾ ಬೇರೆ ಸಮಸ್ಯೆಗಳಿವೆಯೇ…? ಇವೆಲ್ಲವುಗಳ ಬಗ್ಗೆ ತಿಳಿಯಲು ಪ್ರಾಜೆಕ್ಟ್ ಚೀತಾ ಅಧಿಕಾರಿಗಳನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುವುದು ಎಂದು ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ.

ಈ ಚಿರತೆ ಪ್ರಭೇದಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದೆ. ಭೋಪಾಲ್‌ನಲ್ಲಿ ಸೋಮವಾರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ, ಜೂನ್ 6 ರಂದು ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವುದಾಗಿ ಭೂಪೇಂದರ್ ಯಾದವ್ ಹೇಳಿದ್ದಾರೆ. ಚೀತಾ ಪ್ರಭೇದಗಳ ಸುರಕ್ಷತೆ, ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ ಹಣ ಮತ್ತು ಎಲ್ಲಾ ಲಾಜಿಸ್ಟಿಕ್ ಬೆಂಬಲವನ್ನು ಒದಗಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು.

ಭಾರತದಲ್ಲಿ ಚೀತಾಗಳ ಸಂಖ್ಯೆಯನ್ನು ಹೆಚ್ಚಿಸಲು ಕೈಗೊಂಡ ಯೋಜನೆಯು ಒಂದರ ಹಿಂದೆ ಒಂದರಂತೆ ಮರಿಗಳೊಂದಿಗೆ ಚೀತಾ ಸಾವನ್ನಪ್ಪುತ್ತಿರುವುದು ಆತಂಕಕಾರಿಯಾಗಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ದಿನಗಳ ಅಂತರದಲ್ಲಿ ಮೂರು ಮರಿಗಳು ಸಾವನ್ನಪ್ಪಿವೆ. ಈ ವರ್ಷದ ಮಾರ್ಚ್‌ನಿಂದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಆರು ಚೀತಾ ಸಾವನ್ನಪ್ಪಿವೆ. ಪ್ರತಿಕೂಲ ಹವಾಮಾನ ಮತ್ತು ನಿರ್ಜಲೀಕರಣದಿಂದ ಮರಿಗಳ ಸಾವಿಗೆ ಕಾರಣ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!