September 5, 2026
Saturday, September 5, 2026
spot_img

ರಾಜ್ಯದ ಪ್ರವಾಸೋದ್ಯಮವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ʼನಮ್ಮ ಗೈಡ್ʼ ಆ್ಯಪ್ ಅಭಿವೃದ್ಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಪ್ರವಾಸೋದ್ಯಮವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ʼನಮ್ಮ ಗೈಡ್ʼ ಆ್ಯಪ್ ಅಭಿವೃದ್ಧಿ ಮಾಡಲಾಗುತ್ತಿದೆ. ನಮ್ಮ ರಾಜ್ಯದ ಕ್ಷೇತ್ರಗಳನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಲು ಹಾಗೂ ಎಲ್ಲ ಪ್ರವಾಸಿಗರಿಗೂ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಈ ಮುಖ್ಯ ನಿರ್ಧಾರ ಕೈಗೊಂಡಿದೆ.

ಪ್ರವಾಸಿಗರಿಗೆ ಸ್ಥಳೀಯ ಮಾರ್ಗದರ್ಶಕರನ್ನು ಸುಲಭವಾಗಿ ಸಂಪರ್ಕಿಸಲು ನಮ್ಮ ಗೈಡ್‌ ಎನ್ನುವ ಅಪ್ಲಿಕೇಷನ್‌ ಹಾಗೂ ವೆಬ್‌ಸೈಟ್‌ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ಬೇರೆ ದೇಶಗಳಲ್ಲಿ ಪ್ರವಾಸಿಗರು ತಮಗೆ ಯಾವುದಾದರೂ ಸ್ಥಳದ ಬಗ್ಗೆ ಗೈಡ್‌ ಬೇಕು ಎಂದಾದರೆ ಮೊದಲೇ ಆನ್‌ಲೈನ್‌ ಬುಕ್ಕಿಂಗ್‌ ಮಾಡಿಕೊಳ್ತಾರೆ. ಅದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಗೈಡ್‌ಗಳು ಸಿಗಬೇಕು. ಬೇರೆ ದೇಶ, ಭಾಷೆಯ ಜನರಿಗೂ ನಮ್ಮ ಇತಿಹಾಸ, ಸಂಸ್ಕೃತಿ ಅರ್ಥವಾಗಬೇಕು ಎಂದಿದ್ದಾರೆ.

ಈ ಅಪ್ಲಿಕೇಷನ್‌ನಿಂದ ಪ್ರವಾಸಿಗರು ಸ್ಥಳೀಯ ಗೈಡ್‌ಗಳನ್ನು ಹುಡುಕಿ ಸಂಪರ್ಕಿಸಿ ಬುಕ್‌ ಮಾಡಿಕೊಳ್ಳಬಹುದಾಗಿದೆ. ಇದರ ಜೊತೆಗೆ ಗೈಡ್‌ಗಳಿಗೂ ಉದ್ಯೋಗ ಸಿಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !