ರೀಲ್ಸ್ ಪ್ರಿಯರಿಗೆ ಶಾಕ್ ನೀಡಿದ ‘ನಮ್ಮ ಮೆಟ್ರೋ’, ಹುಚ್ಚಾಟ ಮಾಡಿದ್ರೆ ಫೈನ್ ಪಕ್ಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಟ್ರೋದಲ್ಲಿ ರೀಲ್ಸ್ ಮಾಡೋದು, ಹುಚ್ಚಾಟ ಪ್ರದರ್ಶಿಸಿ ಜನರಿಗೆ ತೊಂದರೆ ಕೊಡೋದು, ನ್ಯೂಸೆನ್ಸ್ ಕ್ರಿಯೇಟ್ ಮಾಡೋದು ಮಾಡಿದ್ರೆ ದಂಡ ಬೀಳೋದು ಪಕ್ಕಾ!

ಹೌದು, ನಮ್ಮ ಮೆಟ್ರೋದಲ್ಲಿ ರೀಲ್ಸ್ ಮಾಡಿದ ಯುಟ್ಯೂಬರ್‌ಗಳಿಂದ ಭದ್ರತಾ ವಿಭಾಗದ ಅಧಿಕಾರಿಗಳು ದಂಡ ವಸೂಲಿ ಮಾಡಿದ್ದಾರೆ.

ಸಂತೋಷ್ ಎಂಬಾತ ಚಲಿಸುವ ಮೆಟ್ರೋದಲ್ಲಿ ರೀಲ್ಸ್ ಮಾಡಿ ಇತರರಿಗೆ ಮುಜುಗರ ಉಂಟುಮಾಡಿದ್ದ. ಈತನಿಗೆ 500 ರೂಪಾಯಿ ದಂಡ ವಿಧಿಸಲಾಗಿದೆ. ರೀಲ್ಸ್ ಮಾಡಿ ಅದನ್ನು ಅಪ್‌ಲೋಡ್ ಮಾಡಿದ್ದ ಸಂತೋಷ್ ಹಾಗೂ ಸ್ನೇಹಿತರನ್ನು ಉಪ್ಪಾರಪೇಟೆ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಮೆಟ್ರೋ ಅಧಿಕಾರಿಗಳು ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಮೆಟ್ರೋದಲ್ಲೊಂದು ರೀಲ್ಸ್ ಮಾಡೋಣ ಅಂದುಕೊಂಡಿದ್ರಾ? ಇನ್ನೊಮ್ಮೆ ಯೋಚನೆ ಮಾಡಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!