ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ್ ಜೋಡೋ ಯಾತ್ರೆಗಾಗಿ ದಿನವಿಡೀ ಬಿಸಿಲಿನಲ್ಲಿ ಇದ್ದರೂ ರಾಹುಲ್ ಗಾಂಧಿ ಟ್ಯಾನ್ ಆಗಿಲ್ಲ, ಸನ್‌ಸ್ಕ್ರೀನ್ ಹಚ್ಚುತ್ತೀರಾ ಎಂದು ರಾಹುಲ್ ಗಾಂಧಿಗೆ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಪಾದಯಾತ್ರೆ ವೇಳೆ ತಮ್ಮ ಬೆಂಬಲಿಗರ ಜೊತೆ ಮಾತುಕತೆ ನಡೆಸಿದ್ದು, ಇಷ್ಟು ಬಿಸಿಲಿದ್ದರೂ ನೀವೇಕೆ ಕಪ್ಪಾಗಿಲ್ಲ, ಇದಕ್ಕೆ ಯಾವ ಸನ್‌ಸ್ಕ್ರೀನ್ ಬಳಸುತ್ತೀರಿ ಎಂದು ಕೇಳಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ನಗುತ್ತಾ, ನಾನು ಯಾವ ಸನ್‌ಸ್ಕ್ರೀನ್ ಕೂಡ ಹಚ್ಚೋದಿಲ್ಲ, ಅಮ್ಮ ಸನ್‌ಸ್ಕ್ರೀನ್ ಲೋಷನ್ ಕಳಿಸಿದ್ದಾರೆ. ಆದರೆ ನಾನು ಹಚ್ಚೋದಿಲ್ಲ ಎಂದಿದ್ದಾರೆ. ಈ ತಮಾಷೆ ವಿಡಿಯೋ ವೈರಲ್ ಆಗಿದೆ.
ಮಕ್ಕಳು ಎಷ್ಟು ದೊಡ್ಡವರಾದರೂ ತಾಯಿ ಯಾವಾಗಲೂ ತಾಯಿಯೇ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ರಾಹುಲ್ ಪ್ರಸ್ತುತ ಭಾರತ್ ಜೋಡೋ ಯಾತ್ರೆ ಮುನ್ನಡೆಸುತ್ತಿದ್ದು, ನಿನ್ನೆ ಯಾತ್ರೆಗೆ ವಿರಾಮ ನೀಡಲಾಗಿದೆ.
Mr @RahulGandhi :
I don’t use sunscreen…
मेरी माँ ने मेरे लिए Sunscreen भेजी है लेकिन मैं इस्तेमाल नही करता pic.twitter.com/VTNTWHLHiZ
— Supriya Bhardwaj (@Supriya23bh) October 17, 2022