ಆಸ್ಟ್ರೇಲಿಯಾ ತಂಡಕ್ಕೆ ನೂತನ ನಾಯಕನ ಘೋಷಣೆ: ಸ್ಟಾರ್‌ ವೇಗಿಗೆ ಒಲಿದ ಪಟ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಳೆದ ಸೆಪ್ಟೆಂಬರ್​ನಲ್ಲಿ ಆ್ಯರೋನ್ ಫಿಂಚ್ ಆಸ್ಟ್ರೇಲಿಯಾದ ಏಕದಿನ ತಂಡದ ನಾಯಕತ್ವದ ತ್ಯಜಿಸುವ ಜೊತೆಗೆ ಆ ಮಾದರಿಗೆ ವಿದಾಯ ಘೋಷಿಸಿದ್ದರು. ಆ ಬಳಿಕ ನಾಯಕತ್ವ ಹುದ್ದೆಗೆ ಡೇವಿಡ್‌ ವಾರ್ನರ್‌, ಸ್ಟೀವ್ ಸ್ಮಿತ್ ಸೇರಿದಂತೆ ಅನೇಕ ಆಟಗಾರರ ಹೆಸರುಗಳು ಕೇಳಿಬರುತ್ತಿದ್ದವು. ಈ ಬಗ್ಗೆ ಇಂದು ಅಧಿಕೃತ ಘೋಷಣೆ ಹೊರಡಿಸಿರುವ ಕ್ರಿಕೆಟ್‌ ಆಸ್ಟ್ರೇಲಿಯಾ ಫಿಂಚ್‌ ಸ್ಥಾನದಲ್ಲಿ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನೇ ಏಕದಿನ ಅಂತರಾಷ್ಟ್ರೀಯ ಪಂದ್ಯಗಳಿಗೂ ನಾಯಕನನ್ನಾಗಿ ನೇಮಿಸಿ ಊಹಾಪೋಹಗಳಿಗೆ ತೆರೆ ಎಳೆದಿದೆ.
29 ವರ್ಷ ವಯಸ್ಸಿನ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯ ಏಕದಿನ ಮಾದರಿಯ 27ನೇ  ನಾಯಕರಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಈ ಸ್ಥಾನವನ್ನು ಅಲಂಕರಿಸಿದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿ ನಾಯಕತ್ವದ ಸ್ಥಾನಗಳಿಂದ ಆಜೀವ ನಿಷೇಧಕ್ಕೆ ಒಳಗಾಗಿದ್ದ ಡೇವಿಡ್ ವಾರ್ನರ್ ಅವರ ಮೇಲೆ ಹೇರಲಾಗಿದ್ದ ಅಜೀವ ನಿಷೇಧವನ್ನು ಹಿಂತೆಗೆದುಕೊಂಡು ಅವರನ್ನು ನಾಯಕತ್ವ ಹುದ್ದೆಗೆ ಪರಿಗಣಿಸಲು ಅವಕಾಶ ಮಾಡಿಕೊಡುವ ಪ್ರಕ್ರಿಯೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಾರಂಭಿಸಿದ್ದು ಅಚ್ಚರಿಯ ನಿರ್ಧಾರವಾಗಿತ್ತು. ಈ ಹೆನ್ನೆಲೆಯಲ್ಲಿ ವಾರ್ನರ್‌ ಆಸ್ಟ್ರೇಲಿಯಾದ ಮುಂದಿನ ಕ್ಯಾಪ್ಟನ್‌ ಆಗುತ್ತಾರೆ ಎಂದು ಬಹುತೇಕರು ಊಹಿಸಿದ್ದರು. ಆದರೆ, ಕ್ರಿಕೆಟ್‌ ಆಸ್ಟ್ರೇಲಿಯಾ ಕಮಿನ್ಸ್‌ ರನ್ನು ನೇಮಿಸುವ ಮೂಲಕ ಅಚ್ಚರಿ ನೀಡಿದೆ.

ಈ ಬಗ್ಗೆ ಪ್ರತಿಕ್ರಿಸಿರುವ ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ, ಆದಾಗ್ಯೂ, ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನ ಸಾಮೀಪ್ಯವನ್ನು ಗಮನದಲ್ಲಿಟ್ಟುಕೊಂಡು ವಿಳಂಬವಿಲ್ಲದೆ ಪ್ರಕಟಣೆಯನ್ನು ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
‌ʼಕಮಿನ್ಸ್ ತಂಡವನ್ನು ಮುನ್ನಡೆಸಲು ನಾವು ಬಯಸುವಂತಹ ನಾಯಕತ್ವ ಗುಣಗಳನ್ನು ಹೊಂದಿರುವ  ವ್ಯಕ್ತಿ” ಎಂದು ಬೈಲಿ ಬ್ರಿಸ್ಬೇನ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ನಮ್ಮ ಗಮನವು 2023 ರ ವಿಶ್ವಕಪ್‌ ಮೇಲಿದೆ. ಅದಕ್ಕೂ ಮೊದಲು ನಾವು 14 ಪಂದ್ಯಗಳನ್ನು ಆಡಬಹುದು ಎಂದು ಭಾವಿಸುತ್ತೇನೆ ಮತ್ತು ಆ ಪಂದ್ಯಾವಳಿಗೆ ಈ ಗುಂಪನ್ನು ಮುನ್ನಡೆಸಲು ಪ್ಯಾಟ್ ಪರಿಪೂರ್ಣ ವ್ಯಕ್ತಿ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.
“ಇದು ಒಂದು ದೊಡ್ಡ ಗೌರವ,” ಕಮ್ಮಿನ್ಸ್ ಹೇಳಿದ್ದಾರೆ. “ಕಳೆದ ಕೆಲವು ವರ್ಷಗಳಿಂದ ಆರನ್ ಅವರ ಎಲ್ಲಾ ಪ್ರಯತ್ನಗಳಿಗಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ, ಅವರು ನಮ್ಮ ತಂಡದ ಅದ್ಭುತ ನಾಯಕರಾಗಿದ್ದಾರೆ ಮತ್ತು ತಂಡವು ಉತ್ತಮ ಸ್ಥಾನದಲ್ಲಿದೆ. ಮುಂದಿನ 12 ತಿಂಗಳವರೆಗೆ ನಿಜವಾಗಿಯೂ ಉತ್ಸುಕನಾಗಿದ್ದೇನೆ.” ಎಂದು ಹೇಳಿದ್ದಾರೆ. ವಾರ್ನರ್‌ ಅವರನ್ನು ಉಪನಾಯಕನನ್ನಾಗಿ ನೇಮಿಸುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!