ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಅವರು ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನೂ ನಡೆಸಲಾಯಿತು.
ಈ ವೇಳೆ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಜಿಲ್ ಅವರಿಗೆ ಉಡುಗೊರೆ ನೀಡಿದ್ದಾರೆ. ಪುರಾತನ ಬೆಳ್ಳಿಯಿಂದ ತಯಾರಿಸಿದ ರೈಲು ಮಾದರಿಯನ್ನು ಗಿಫ್ಟ್ ನೀಡಿದ್ದಾರೆ. ಈ ರೈಲಿನ ಮಾದರಿಯು 92.5 ಬೆಳ್ಳಿಯಿಂದ ಮಾಡಲ್ಪಟ್ಟಿದೆ ಎನ್ನಲಾಗಿದೆ.
ಈ ಮಾದರಿಯಲ್ಲಿ “ದೆಹಲಿ – ಡೆಲವೇರ್” ಎಂದು ಬರೆಯಲಾಗಿದೆ. ಇದಲ್ಲದೆ ಇಂಜಿನ್‌ನ ಬದಿಗಳಲ್ಲಿ ಭಾರತೀಯ ರೈಲ್ವೆ ಎಂದು ಬರೆಯಲಾಗಿದೆ. ಪ್ರತಿ ಪೆಟ್ಟಿಗೆಯ ಮೇಲಿನ ಕಲಾಕೃತಿಗಳು ವಿಭಿನ್ನವಾಗಿದ್ದು, ಕಾಶ್ಮೀರಿ ಕಲೆಯನ್ನು ಪ್ರತಿಬಿಂಬಿಸುತ್ತದೆ.