BIG BOSS | ಕಾರ್ತಿಕ್ ಜೊತೆ ನಮ್ರತಾ ಕ್ಲೋಸ್, ನಿಜ್ವಾಗ್ಲೂ ಉರ್ಕೊಂಡ್ರಾ ಸ್ನೇಹಿತ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೊಡ್ಮನೆ ಮತ್ತೆ ಮೊದಲಿನಂತಾಗಿದೆ. ಹಾಲ್‌ನಲ್ಲಿರೋ ಸೋಫಾ ತುಂಬುವಷ್ಟು ಜನರು ಮತ್ತೆ ವಾಪಾಸಾಗಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ಅಲ್ಲ, ಹಳೇ ಕಂಟೆಸ್ಟೆಂಟ್ಸ್ ಮತ್ತೆ ಮನೆಗೆ ವಾಪಾಸಾಗಿದ್ದಾರೆ. ಇದೀಗ ಕಾರ್ತಿಕ್ ಹಾಗೂ ನಮ್ರತಾ ತುಂಬಾ ಕ್ಲೋಸ್ ಆಗಿದ್ದು, ಸ್ನೇಹಿತ್‌ಗೆ ಹಿಡಿಸಿಲ್ಲ ಎನ್ನುವಂತೆ ಕಾಣಿಸಿದೆ.

ಈ ಹಿಂದೆ ಮನೆಯಲ್ಲಿದ್ದಾಗ ಸ್ನೇಹಿತ ಓಪನ್ ಆಗಿಯೇ ನಮ್ರತಾರನ್ನು ಇಷ್ಟಪಡುತ್ತಿರುವುದಾಗಿ ಹೇಳಿದ್ದರು. ಹೊರಗೆ ಬಂದ ನಂತರ ಈ ಬಗ್ಗೆ ಮುಂದುವರಿಯಬಹುದಾ ಎಂದು ಕೇಳಿದ್ದರು. ಸ್ನೇಹಿತ್ ಹೋಗುವ ಸಮಯದಲ್ಲಿ ನಮ್ರತಾ ಕೂಡ ಸ್ನೇಹಿತ್‌ರನ್ನು ಇಷ್ಟಪಡ್ತಿದ್ದಾರೇನೋ ಎನ್ನುವಂತೆ ಕಾಣಿಸಿತ್ತು.

ಇದೀಗ ಮನೆಗೆ ಬಂದ ಕಂಟೆಸ್ಟೆಂಟ್ಸ್ ಬಳಿ ನಮ್ರತಾ ಸ್ನೇಹಿತ್ ಉರ್ಕೊಂಡ್ರಾ ಎಂದು ಪ್ರಶ್ನಿಸಿದ್ದಾರೆ. ಸ್ನೇಹಿತ್ ಕೂಡ ನಮ್ರತಾಗೆ ಒಂದು ಹಗ್ ಕೂಡ ನೀಡದೇ ನಮಸ್ಕಾರ ನಮ್ರತಾ ಎಂದಷ್ಟೇ ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!