ಹೊಸ ವರ್ಷಾಚರಣೆಗೆ ನಂದಿ ಗಿರಿಧಾಮ ಕ್ಲೋಸ್: ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಡಿಸಿ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರಿಗರ ಹಾಟ್‌ ಸ್ಪಾಟ್‌, ಚಾರಣಿಗರ ಫೇವರೆಟ್‌ ಪ್ಲೇಸ್‌ನಲ್ಲಿ ಹೊಸ ವರ್ಷಾಚರಣೆ ಮಾಡದಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ನಂದಿಹಿಲ್ಸ್‌ನಲ್ಲಿ ಹೊಸ ವರ್ಷ ಸೆಲಬ್ರೇಟ್‌ ಮಾಡುವವರ ಕನಸಿಎ ತಣ್ಣೀರೆರಚಿದಂತಾಗಿದೆ. ಈ ನಿರ್ಬಂಧ ಡಿಸೆಂಬರ್ 31 ಸಂಜೆ 6 ಗಂಟೆಯಿಂದ ಜನವರಿ 1 ಬೆಳಗ್ಗೆ 6 ಗಂಟೆವರೆಗೂ ಜಾರಿಯಲ್ಲಿರುತ್ತದೆ.

ನಂದಿಗಿರಿಧಾಮದ ಪಾವಿತ್ರ್ಯತೆ, ಪರಿಸರವನ್ನು ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿಸಿ ತಿಳಿಸಿದರು. ಜೊತೆಗೆ ಕೊರೊನಾ ಸೋಂಕು, ಡ್ರಂಕ್‌ ಅಂಡ್‌ ಡ್ರೈವ್.‌ ಪಾರ್ಟಿ ನೆಪದಲ್ಲಿ ಮದ್ಯ ಸೇವಿಸಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರವನ್ನು ಹಾಳು ಮಾಡುವ ಉದ್ದೇಶದಿಂದ ನಂದಿ ಗಿರಿಧಾಮ ಕ್ಲೋಸ್‌ ಮಾಡಲಾಗುತ್ತದೆ. ಡಿಸೆಂಬರ್​ 31ರಂದು ರೂಮ್ ಬುಕಿಂಗ್ ಸಹ ರದ್ದುಪಡಿಸಲಾಗಿದ್ದು, ಗಿರಿಧಾಮದ ಸುತ್ತಮುತ್ತ ಸೂಕ್ತ ಬಂದೋಬಸ್ತ್ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಪಾರ್ಟಿ ಮೂಡ್‌ನಲ್ಲಿದ್ದವರಿಗೆ ನಿರಾಸೆ

ಈಗಾಗಲೇ ನಂದಿಬೆಟ್ಟದ ಸುತ್ತಮುತ್ತ ಇದ್ದ ಹೊಟೇಲ್‌, ರೆಸ್ಟೋರೆಂಟ್‌, ಹೋಂಸ್ಟೇಗಳು ಬುಕ್‌ ಆಗಿವೆ ಪಾರ್ಟಿ ಮಾಡಬೇಕೆಂದು ಯೋಚಿಸಿ ಬುಕ್ ಮಾಡಿರುವವರಿಗೆ ನಿರಾಸೆಯಾಗಿದೆ. ಇದರ ಜೊತೆಗೆ ಚಿಕ್ಕಬಳ್ಳಾಫುರ ಜಿಲ್ಲಾ ಪೊಲೀಸರು ರಾತ್ರಿ 11.30ರವೆರೆಗೆ ಮಾತ್ರವೇ ಸಂಭ್ರಮಾಚರಣೆಗೆ ಅವಕಾಶ ನೀಡಿದ್ದಾರೆ. ಆದೇಶದ ನೀತಿ-ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ಕೂಡ ಕೊಟ್ಟಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!