ನಂದಿನಿ ಸಿಹಿ ಉತ್ಸವ: ಶೇ.20ರಷ್ಟು ರಿಯಾಯಿತಿಯಲ್ಲಿ ಸಿಗಲಿದೆ ಸ್ವೀಟ್ಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌)ನ ಉತ್ಪನ್ನವಾದ ನಂದಿನಿ ಬ್ರ್ಯಾಂಡ್‌ನ ಅಡಿಯಲ್ಲಿ ಆ.15ರಿಂದ ‘ನಂದಿನಿ ಸಿಹಿ ಉತ್ಸವ-2023’ ಆರಂಭಗೊಳ್ಳಲಿದ್ದು, ಈ ವೇಳೆ 30ಕ್ಕೂ ಹೆಚ್ಚು ಬಗೆಯ ಸಿಹಿ ತಿಂಡಿಗಳನ್ನು ಮಾರಾಟ ಮಾಡಲು ಕೆಎಂಎಫ್‌ ಮುಂದಾಗಿದೆ.ಸೆ.20ರವರೆಗೆ ನಡೆಸಲು ನಿರ್ಧಾರ ಮಾಡಲಾಗಿದೆ.

ಈ ವರ್ಷ ನಂದಿನಿ ಸಿಹಿ ಉತ್ಸವಕ್ಕೆ ಶೇ.20ರಷ್ಟು ರಿಯಾಯಿತಿ ನೀಡುತ್ತಿದೆ. ನಂದಿನಿ ಹೊಸ ಉತ್ಪನ್ನಗಳಾದ ಬೆಲ್ಲದ ಪೇಡ, ಸ್ಪೆಷಲ್ ಹಾಲಿನ ಬರ್ಫಿ, ಚಾಕೊಲೇಟ್ ಕುಕ್ಕಿಸ್, ಕಡಲೇ ಬೀಜದ ಚಿಕ್ಕಿ ಸೇರಿ ಹಲವು ಸಿಹಿ ಪದಾರ್ಥಗಳನ್ನು ಮಾರಾಟ ಮಾಡುತ್ತಿದೆ. ಬೆಲ್ಲದ ಜೊತೆಗೆ ನಂದಿನಿ ಖೋವಾ ಸೇರಿ ತಯಾರಿಸಲಾಗಿರುವ ‘ಖೋವ ಕಡಲೆ ಮಿಠಾಯಿ’ ಮಾರುಕಟ್ಟೆಗೆ ಬಂದಿದೆ. ಪ್ರಸ್ತುತ ನಂದಿನಿ ಬ್ರ್ಯಾಂಡ್‌ನಲ್ಲಿ 30ಕ್ಕೂ ಹೆಚ್ಚು ವಿವಿಧ ಬಗೆಯ ಸಿಹಿ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ.

ಅಗಸ್ಟ್ 15 ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 20 ವರೆಗೆ ನಡೆಯಲಿದೆ. ಗಣೇಶ ಹಬ್ಬದವರೆಗೂ ನಂದಿನಿ ಸಿಹಿ ಉತ್ಸವವನ್ನು ರಾಜ್ಯದ್ಯಾಂತ ನಡೆಯಲಿದೆ.

ಮೈಸೂರ್ ಪಾಕ್, ಹಾಲಿನ ಪೇಡಾ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಬಾದಾಮ್, ಕ್ಯಾಷು, ಡ್ರೈಪ್ರೂರ್ಟ್ಸ್, ಕೋಕೋನಟ್ ಚಾಕೋಲೇಟ್ ಬರ್ಫಿಗಳ ಕುಂದ, ಜಾಮೂನ್, ರಸಗುಲ್ಲಾ, ಸಿರಿಧಾನ್ಯ ಲಾಡು, ಸಿರಿಧಾನ್ಯ ಹಾಲಿನ ಪುಡಿ, ಗೋಧಿ ಲಾಡು, ಕುಕ್ಕೀಸ್ ಮತ್ತು ಎಲ್ಲಾ ಸಿಹಿ ಉತ್ಪನ್ನಗಳ ಮಾರಾಟ ದರದ ಮೇಲೆ ಶೇ. 20 ರಷ್ಟು ರಿಯಾಯಿತಿ ನೇರವಾಗಿ ಗ್ರಾಹಕರಿಗೆ ನೀಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!