Friday, September 29, 2023

Latest Posts

ಮೊಬೈಲ್‌ ಸಿಮ್‌ ಕಾರ್ಡ್‌ ಪಾಯಿಂಟ್‌ ಆಫ್‌ ಸೇಲ್‌ ಡೀಲರ್‌ಗಳ ನೋಂದಣಿ ಕಡ್ಡಾಯ: ಕೇಂದ್ರ ಸರಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೊಬೈಲ್‌ ಸಿಮ್‌ ಕಾರ್ಡ್‌ ಡೀಲರ್‌ ಗಳಿಗೆ ಇನ್ಮುಂದೆ (Mobile Sim Card Dealer) ಪೊಲೀಸ್‌ ಪರಿಶೀಲನೆ (Police Verification) ಮತ್ತು ಬಯೋಮೆಟ್ರಿಕ್‌ (Biometric) ಪರಿಶೀಲನೆ ಕಡ್ಡಾಯವಾಗಿದೆ. ಇದರ ಜೊತೆಗೆ ಎಲ್ಲಾ ಪಾಯಿಂಟ್‌ ಆಫ್‌ ಸೇಲ್‌ ಡೀಲರ್‌ಗಳ ನೋಂದಣಿಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಈ ಕುರಿತು ಮಾಹಿತಿ ನೀಡಿದ್ದು, ಈ ಕಡ್ಡಾಯ ನಿಯಮ ಉಲ್ಲಂಘಿಸಿದರೆ 10 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಸಂಚಾರ ಸಾಥಿ ಪೋರ್ಟಲ್ ಪ್ರಾರಂಭವಾದಾಗಿನಿಂದ ಅಕ್ರಮವಾಗಿ ಪಡೆದ 52 ಲಕ್ಷ ಸಂಪರ್ಕಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲಾಗಿದೆ. ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ 67,000 ಡೀಲರ್‌ಗಳನ್ನು ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿದೆ. ಮೇ 2023 ರಿಂದ 300 ಸಿಮ್ ಕಾರ್ಡ್ ವಿತರಕರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಹಿಂದೆ ಸಿಮ್‌ ಕಾರ್ಡ್‌ ಬಲ್ಕ್‌ ಆಗಿ ಖರೀದಿಸಲು ಅವಕಾಶವಿತ್ತು. ಇನ್ನು ಮುಂದೆ ಇದನ್ನು ಕೊನೆಗೊಳಿಸಿ ಸರಿಯಾದ ವ್ಯಾಪಾರ ಸಂಪರ್ಕದ ನಿಬಂಧನೆಯನ್ನು ತರುತ್ತೇವೆ. ಇದರಿಂದಾಗಿ ಮೋಸದ ಕರೆಗಳನ್ನು ನಿಲ್ಲಿಸಲು ಸಹಾಯವಾಗಲಿದೆ ಎಂದರು.

ದೇಶದಲ್ಲಿ 10 ಲಕ್ಷ ಸಿಮ್ ಡೀಲರ್‌ಗಳಿದ್ದು, ಅವರಿಗೆ ಪೊಲೀಸ್ ಪರಿಶೀಲನೆಗೆ ಸಾಕಷ್ಟು ಸಮಯ ನೀಡಲಾಗುವುದು ಎಂದು ವೈಷ್ಣವ್ ಹೇಳಿದ್ದಾರೆ.

ಮೇ ತಿಂಗಳಲ್ಲಿ, ಪಂಜಾಬ್ ಪೊಲೀಸರು (Punjab Police) ನಕಲಿ ಗುರುತಿನ ಮೂಲಕ ಸಕ್ರಿಯಗೊಂಡ 1.8 ಲಕ್ಷ ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಿದ್ದರು. ಈ ಸಿಮ್ ಕಾರ್ಡ್‌ಗಳನ್ನು ನೀಡಿದ್ದಕ್ಕಾಗಿ 17 ಜನರನ್ನು ಬಂಧಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!