ಹೊಸದಿಗಂತ ವರದಿ, ನಂಜನಗೂಡು:
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಶಿವಲಿಂಗಯ್ಯ ಹಾಗೂ ಶಿಕ್ಷಕ ರಮೇಶ್ ಗೌರವ ಧನ ಬಿಡುಗಡೆ ಮಾಡಲು ವ್ಯಕ್ತಿಯೊಬ್ಬರಿಂದ ೫ ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮೈಸೂರಿನ ತಿಲಕ್ ನಗರದ ನಿವಾಸಿ ನರಸಿಂಹಮೂರ್ತಿ ಎಂಬುವರು ಶಿಕ್ಷಣ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ೩ ತಿಂಗಳುಗಳಿoದ ಸಂಬಳ ಬಿಡುಗಡೆ ಮಾಡಲಾಗಿರಲಿಲ್ಲ. ನಂಜನಗೂಡಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಗೌರವ ಧನ ಬಿಡುಗಡೆ ಮಾಡುವ ಸಲುವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪರವಾಗಿ ಬಿಇಆರ್ಟಿ ವಿಶೇಷ ಶಿಕ್ಷಕರಾಗಿರುವ ರಮೇಶ್ ಎಂಬುವವರು ೫ ಸಾವಿರ ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಎಸ್ಪಿ ವಿ.ಜೆ.ಸಜೀತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಲೋಕಾಯುಕ್ತ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ವಿ.ಕೃಷ್ಣಯ್ಯ, ಇನ್ಸ್ಪೆಕ್ಟರ್ ರವಿಕುಮಾರ್, ಉಮೇಶ್, ಜಯರತ್ನ, ಸಿಬ್ಬಂದಿಗಳಾದ ವೀರಭದ್ರಸ್ವಾಮಿ, ಗೋಪಿ, ಲೋಕೇಶ್, ಆಶಾ, ಕಾಂತರಾಜು, ಮೋಹನ, ಪ್ರದೀಪ್, ಮೋಹನ್,ಗೌಡ. ಭಾಗವಹಿಸಿದ್ದರು.
Correct