ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ರಸ್ತೆಗಿಳಿದ ಐಟಿ ಉದ್ಯೋಗಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಪಿ ಕೌಶಲ್ಯ ಅಭಿವೃದ್ಧಿ ಪ್ರಕರಣದಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿರುವುದು ಗೊತ್ತೇ ಇದೆ. ಸದ್ಯ ಚಂದ್ರಬಾಬು ರಾಜಮಂಡ್ರಿಯ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಎಪಿ ಸರ್ಕಾರದ ಪಿತೂರಿಯ ಭಾಗವಾಗಿ ಚಂದ್ರಬಾಬು ಅವರನ್ನು ಅಕ್ರಮವಾಗಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿ ಟಿಡಿಪಿ ಕಾರ್ಯಕರ್ತರು ಆಂಧ್ರದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರಿಗೆ ಜೊತೆಯಾಗಿ ಹೈದರಾಬಾದ್, ಬೆಂಗಳೂರು ಮತ್ತು ಇತರ ನಗರಗಳಲ್ಲಿ ಐಟಿ ಉದ್ಯೋಗಿಗಳು ಪ್ರತಿಭಟನೆಗಿಳಿದಿದ್ದಾರೆ.

ಹೈದರಾಬಾದ್ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಐಟಿ ಉದ್ಯೋಗಿಗಳು ಚಂದ್ರಬಾಬು ಬಂಧನವನ್ನು ವಿರೋಧಿಸಿ ರಸ್ತೆಗಿಳಿದರು. ಹಲವು ಐಟಿ ಕಂಪನಿಗಳ ಉದ್ಯೋಗಿಗಳು ಮಾದಾಪುರ, ಹೈಟೆಕ್ ಸಿಟಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ‘ನಾನು ಸಿಬಿಎನ್‌ನೊಂದಿಗೆ ಇದ್ದೇನೆ’ ಎಂದು ಘೋಷಣೆಗಳನ್ನು ಕೂಗಿದರು.

ಹೈದರಾಬಾದ್, ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳಲ್ಲಿ ಚಂದ್ರಬಾಬು ಬಂಧನವನ್ನು ವಿರೋಧಿಸಿ ರಸ್ತೆಗಿಳಿದ ಐಟಿ ಉದ್ಯೋಗಿಗಳನ್ನು ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅಭಿನಂದಿಸಿದರು. ಇದನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದು, ‘ಹೈದರಾಬಾದ್, ಬೆಂಗಳೂರು ಸೇರಿದಂತೆ ಇತರೆ ನಗರ, ಪಟ್ಟಣಗಳಲ್ಲಿ ಸಾವಿರಾರು ಜನ ರಸ್ತೆಗಿಳಿದಿದ್ದಾರೆ ನಾನು ನೌಕರರನ್ನು ಅಭಿನಂದಿಸುತ್ತೇನೆ. ಚಂದ್ರಬಾಬು ನಾಯ್ಡು ಮೇಲೆ ನಿಮ್ಮ ಬೇಷರತ್ತಾದ ಪ್ರೀತಿ ಮತ್ತು ವಾತ್ಸಲ್ಯವನ್ನು ಧಾರೆಯೆರೆದಿದ್ದಕ್ಕಾಗಿ ನಾವು ಪ್ರತಿಯೊಬ್ಬರಿಗೂ ಚಿರಋಣಿಯಾಗಿದ್ದೇವೆ. ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಲೋಕೇಶ್ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!