Friday, March 31, 2023

Latest Posts

ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಕ್ಕೆ ನರೇಂದ್ರ ಮೋದಿ ಸಹಾಯ ಮಾಡುತ್ತಾರೆ : ಅಮರ್​ಜಿತ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಾಯ ಮಾಡುತ್ತಾರೆ ಎಂದು ಭಾರತೀಯ ಗುಪ್ತಚರ ಸಂಸ್ಥೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಮಾಜಿ ಮುಖ್ಯಸ್ಥ ಅಮರ್​ಜಿತ್ ಸಿಂಗ್ ದುಲಾತ್ ಹೇಳಿದ್ದಾರೆ.

ಕಳೆದ ಕೆಲವು ತಿಂಗಳುಗಳಲ್ಲಿ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ನೆರೆಯ ದೇಶ ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಸಹಾಯ ಹಸ್ತವನ್ನು ಚಾಚುತ್ತಾರೆ ಎಂದಿದ್ದಾರೆ.

“ಈ ವರ್ಷದಲ್ಲಿ ಮೋದಿಯವರು ಪಾಕಿಸ್ತಾನವನ್ನು ಪಾರು ಮಾಡುತ್ತಾರೆ ಎಂಬುದು ನನ್ನ ಊಹೆ. ಆಂತರಿಕ ಮಾಹಿತಿ ಇಲ್ಲ, ಆದರೆ ಇದು ನನ್ನ ಊಹೆ,” ಎಂದು ದುಲಾತ್ ತಿಳಿಸಿದ್ದಾರೆ.

ಪಾಕಿಸ್ತಾನವು ಕಳೆದ ಕೆಲವು ತಿಂಗಳುಗಳಿಂದ ಹಲವಾರು ಹಣಕಾಸಿನ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಹಣಕಾಸಿನ ಅವಶ್ಯಕತೆಯಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!