‘ನರೇಂದ್ರ ಮೋದಿ, ಪ್ರೈಮ್ ಮಿನಿಸ್ಟರ್ ಆಫ್ ಭಾರತ್”: ಮೊರಕ್ಕೊ ಸಚಿವರ ಮಾತಿಗೆ ಎಲ್ಲೆಡೆ ಕೇಳಿಸಿತು ಚಪ್ಪಾಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೈಬ್ರೆಂಟ್ ಗುಜರಾತ್ ಸಮ್ಮಿಟ್ ನಲ್ಲಿ 35 ದೇಶದ ಪ್ರತಿನಿಧಿಗಳು, 16 ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳು ಪಾಲ್ಗೊಂಡಿದೆ.
ಮೊರಕ್ಕೊ ಸಚಿವ ರ್ಯಾದ್ ಮೆಜೋರ್ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದು, ಈ ವೇಳೆ ಅವರು ಆಡಿದ ಮಾತುವೈರಲ್ ಆಗಿದೆ. ಅದೇನೆಂದರೆ ನರೇಂದ್ರ ಮೋದಿ, ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ರ್ಯಾದ್ ಮೆಜೋರ್ ಭಾಷಣ ಆರಂಭಿಸಿದ್ದಾರೆ.

ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ವೈಬ್ರೆಂಟ್ ಗುಜರಾತ್ ಸಮ್ಮಿಟ್ ಉದ್ಘಾಟನೆಗೊಂಡಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೊರಕ್ಕೊ ದೇಶದ ಪ್ರತಿನಿಧಿ, ಸಚಿವ ರ್ಯಾದ್ ಮೆಜೋರ್, ಮಾತಿನ ಆರಂಭದಲ್ಲೇ ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ ಎಂದಿಲ್ಲ. ಬದಲಿಗೆ ನರೇಂದ್ರ ಮೋದಿ, ಭಾರತದ ಪ್ರಧಾನಿ ಎಂದು ಉಚ್ಚರಿಸಿದ್ದಾರೆ. ಈ ಮಾತು ಹೇಳುತ್ತಿದ್ದಂತೆ ಸಭೆಯಲ್ಲಿ ನರೆದಿದ್ದ ಎಲ್ಲರೂ ಚಪ್ಪಾಳೆ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತ ಪ್ರಧಾನಿ ಮೋದಿ ಕೂಡ ನಗುಮುಖದಿಂದ ಚಪ್ಪಾಳೆ ತಟ್ಟಿ ಧನ್ಯವಾದ ಹೇಳಿದ್ದಾರೆ. ಮೊರಕ್ಕೆ ಸಚಿವರ ಈ ಹೇಳಿಕೆ ವಿಡಿಯೋ ವೈರಲ್ ಆಗಿದೆ.

ವೈಬ್ರೆಂಟ್ ಗುಜರಾತ್ ಸಮ್ಮಿಟ್ ಉದ್ಘಾಟನೆ ಮಾಡಿದ ಮಾತನಾಡಿದ ಪ್ರಧಾನಿ ಮೋದಿ ಭಾರತ ವಿಶ್ವದ 3ನೇ ಅತೀ ದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ. ಭಾರತದಲ್ಲಿ ಹೂಡಿಕೆಗೆ ಅತ್ಯುತ್ತಮ ವಾತಾವರಣವಿದೆ. ಮೂಲಸೌಕರ್ಯಗಳನ್ನು ಮೇಲ್ದರ್ಜೆ ಏರಿಸಲಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!