Thursday, August 11, 2022

Latest Posts

ಮೋದಿ ಕಾಲಿಗೆ ನಮಸ್ಕರಿಸಿದ ಬಿಜೆಪಿ ನಾಯಕನಿಗೆ ಕೈ ಸನ್ನೆಯಲ್ಲೇ ಬೇಡ ಎಂದ ಪ್ರಧಾನಿ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಪ್ರಧಾನಿ ಮೋದಿ ಅವರ ಕಾಲಿಗೆ ಬಿದ್ದ ಉನ್ನಾವೋ ಜಿಲ್ಲಾ ಬಿಜೆಪಿ ಅಧ್ಯಕ್ಷ ಅವಧೇಶ್ ಕಟಿಯಾರ್ ಅವರ ಪಾದವನ್ನು ಸ್ವತಃ ಪ್ರಧಾನಿ ಮೋದಿಯೇ ಮುಟ್ಟಿದ್ದಾರೆ. ಇದೀಗ ಈ ಕುರಿತ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಈ ವೇಳೆ ಮೋದಿಗೆ ಶ್ರೀರಾಮನ ವಿಗ್ರಹವನ್ನು ನೀಡಿ ಸ್ವಾಗತಿಸಿ, ಅವರ ಪಾದಗಳಿಗೆ ನಮಸ್ಕಾರ ಮಾಡಲು ಬಾಗಿದ ಉನ್ನಾವೋ ಜಿಲ್ಲೆಯ ಬಿಜೆಪಿ ಅಧ್ಯಕ್ಷರಿಗೆ ವೇದಿಕೆಯಲ್ಲೇ ಪ್ರಧಾನಿ ಮೋದಿ ಪಾಠ ಮಾಡಿದ್ದಾರೆ.
ತಮ್ಮ ಕಾಲಿಗೆ ನಮಸ್ಕರಿಸಲು ಮುಂದಾದ ಬಿಜೆಪಿ ಅಧ್ಯಕ್ಷರಿಗೆ ತಡೆದ ಪ್ರಧಾನಿ ಮೋದಿ ಒಂದೂ ಮಾತನಾಡದೆ ಸನ್ನೆಯ ಮೂಲಕವೇ ಆ ರೀತಿ ಮಾಡಬಾರದೆಂದು ಸೂಚಿಸಿದ್ದಾರೆ.ಬಳಿಕ ತಾವು ಕೂಡ ಕೆಳಗೆ ಬಾಗಿ ಕಟಿಯಾರ್ ಅವರಿಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಬಿಜೆಪಿಯಿಂದ ಉನ್ನಾವೊ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಅವಧೇಶ್ ಕಟಿಯಾರ್ ಅವರು ಈ ಹಿಂದೆ ಉನ್ನಾವೊದಲ್ಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss