Saturday, February 4, 2023

Latest Posts

ಹೊಸ ವರ್ಷಕ್ಕೆ ಹಸಮಣೆ ಏರಲಿರುವ ಪವಿತ್ರಾ-ನರೇಶ್:ವಿಡಿಯೋ ಮೂಲಕ ಅಧಿಕೃತ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಹಿರಿಯ ನಟ ನರೇಶ್-ಪವಿತ್ರಾ ಲೋಕೇಶ್ ಈ ವರ್ಷ ಟಾಲಿವುಡ್‌ನಲ್ಲಿ ಹೆಚ್ಚು ವೈರಲ್ ಆಗಿದ್ದಾರೆ. ಎಲ್ಲದಕ್ಕೂ ಬ್ರೇಕ್‌ ಹಾಕಲು ಹೊಸ ವರ್ಷಕ್ಕೆ ಹೊಸ ನಿರ್ಧಾರ ತೆಗೆದುಕೊಂಡು ಇಬ್ಬರೂ ಹಸೆಮಣೆ ಏರಲು ನಿರ್ಧರಿಸಿದ್ದಾರೆ. ಸಿನಿಮಾದಲ್ಲಿ ಜೊತೆಯಾಗಿ ನಟಿಸಿ, ಹೊರಗೆ ಇವರಿಬ್ಬರ ಸಂಬಂಧದ ಕಾಂಟ್ರವರ್ಸಿ ಸಖತ್ ವೈರಲ್ ಆಗಿದೆ. ಮೂರನೇ ಪತ್ನಿಯೊಂದಿಗೆ ನರೇಶ್‌ನ ಜಗಳ, ಪವಿತ್ರಾ ಮತ್ತು ನರೇಶ್ ಹೋಟೆಲ್‌ನಲ್ಲಿ ತಗಲ್ಲಾಕ್ಕೊಂಡು ಆದ ಗಲಾಟೆ ಅಷ್ಟಿಷ್ಟಲ್ಲ.

ನರೇಶ್-ಪವಿತ್ರಾ ಲೋಕೇಶ್‌ಗೆ ಹಲವು ಸುದ್ದಿಗಳು ಮತ್ತು ಗಾಸಿಪ್‌ಗಳು ಬಂದಿವೆ ಆದರೆ ಅವರು ಅಧಿಕೃತವಾಗಿ ಪ್ರತಿಕ್ರಿಯಿಸಲಿಲ್ಲ ಆದರೆ ಅವರು ತಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಬರೆದಿದ್ದಕ್ಕಾಗಿ ಅನೇಕ ಯೂಟ್ಯೂಬ್ ಚಾನೆಲ್‌ಗಳು ಮತ್ತು ಸೈಟ್‌ಗಳ ವಿರುದ್ಧ ಪೊಲೀಸ್ ಕೇಸ್ ಸಹ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಮೇಲೆ ಒಂದು ರೇಂಜ್ ನಲ್ಲಿ ಮೀಮ್ ಗಳು ಹರಿದಾಡಿದ್ದವು.

ನಟ ನರೇಶ್ ಇಂದು ತಮ್ಮ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪವಿತ್ರಾ ಜೊತೆ ಸೇರಿ ಕೇಕ್ ಕಟ್ ಮಾಡಿ ಕೇಕ್ ತಿನ್ನಿಸಿ ಇಬ್ಬರೂ ಲಿಪ್ ಲಾಕ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಾವು ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದು ಘೋಷಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಪವಿತ್ರಿ-ನರೇಶ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!